ಜಗದೀಪ್ ಧನಕರ್ 
ದೇಶ

ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಮಯ ಬಂದಿದೆ: ಉಪ ರಾಷ್ಟ್ರಪತಿ ಧನಕರ್

ಸಂವಿಧಾನದ ಪಿತಾಮಹರ ಪ್ರಕಾರ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ತರುವ ಸಮಯ ಈಗ ಬಂದಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಹೇಳಿದ್ದಾರೆ.

ಗುವಾಹಟಿ: ಸಂವಿಧಾನದ ಪಿತಾಮಹರ ಪ್ರಕಾರ, ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ತರುವ ಸಮಯ ಈಗ ಬಂದಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮಂಗಳವಾರ ಹೇಳಿದ್ದಾರೆ.

ಇಂದು ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 25ನೇ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಧನಕರ್ ಅವರು, ಸಂವಿಧಾನದ 44ನೇ ವಿಧಿಯು ದೇಶಾದ್ಯಂತ ತನ್ನ ನಾಗರಿಕರ ಸುರಕ್ಷತೆ ಕಲ್ಪಿಸಲು ಯುಸಿಸಿಯ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ ಎಂದರು.

"ಸಂವಿಧಾನದ ಪಿತಾಮಹರ ಆಲೋಚನಾ ಪ್ರಕ್ರಿಯೆಯಲ್ಲೂ ಯುಸಿಸಿಯ ಚಿಂತನೆಗಳಿದ್ದವು. ಹೀಗಾಗಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕಾಲ ಸನ್ನಿಹಿತವಾಗಿದೆ. ಇದಕ್ಕೆ ಅಡ್ಡಿ ಅಥವಾ ಮತ್ತಷ್ಟು ವಿಳಂಬಕ್ಕೆ ಯಾವುದೇ ಕಾರಣವಿಲ್ಲ" ಎಂದು ಅವರು ಹೇಳಿದರು.

"ಸಂವಿಧಾನವನ್ನು ಅನುಸರಿಸಿ, ಯುಸಿಸಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವಾಗ ಕೆಲವು ಜನರ ಪ್ರತಿಕ್ರಿಯೆ ನೋಡಿ ನಾನು ದಿಗ್ಭ್ರಮೆಗೊಂಡಿದ್ದೇನೆ. ರಾಜಕೀಯ ಹಿತಾಸಕ್ತಿಯು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ' ಎಂದು ಧನಕರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳದಲ್ಲಿ CAA, UCC ತ್ವರಿತ ಅನುಷ್ಠಾನ; ಮಾತುವಾ, ನಮಸುದ್ರರಿಗೆ ಪೌರತ್ವ ನೀಡುತ್ತೇವೆ: ಪ್ರಧಾನಿ ಮೋದಿ

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

ಹಾಡಹಗಲೇ, ನಡುರಸ್ತೆಯಲ್ಲಿ ಲಾಯರ್ ಗೆ ಗುಂಡಿಕ್ಕಿ ಹತ್ಯೆ, ಬೈಕ್ ಸ್ಟಾರ್ಟ್ ಆಗದೇ ಹಂತಕರ ಪರದಾಟ! Video

Viral Video: 'ರೀಲ್ಸ್‌ಗಾಗಿ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ'; ಬಾಲ್ಕನಿಯಿಂದ ಜಿಗಿದ ಬಾಲಕ, ಅಪ್ಪನ ಹುಚ್ಚಾಟಕ್ಕೆ ತೀವ್ರ ಆಕ್ರೋಶ!

SCROLL FOR NEXT