ದೇಶ

ಕಡಲ ಪ್ರದೇಶಗಳ ಕಾವಲಿಗಾಗಿ ಎರಡು ನವೀಕೃತ ಡಾರ್ನಿಯರ್ ವಿಮಾನ ಖರೀದಿಗೆ ಹೆಚ್ಎಲ್-ರಕ್ಷಣಾ ಸಚಿವಾಲಯ ಒಪ್ಪಂದ

Srinivas Rao BV

ನವದೆಹಲಿ: ಇಂಡಿಯನ್ ಕೋಸ್ಟ್ ಗಾರ್ಡ್ (ಐಸಿಜಿ) ಗಾಗಿ 2 ನವೀಕೃತ ಡಾರ್ನಿಯರ್ ವಿಮಾನ ಖರೀದಿಗೆ ರಕ್ಷಣಾ ಸಚಿವಾಲಯ ಹೆಚ್ಎಎಲ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.

ಸಂಬಂಧಿಸಿದ ಎಂಜಿನಿಯರಿಂಗ್ ಸಪೋರ್ಟ್ ಪ್ಯಾಕೇಜ್ ಸಹ ಇದರಲ್ಲಿ ಇರಲಿದ್ದು, ಒಟ್ಟು 458.87 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಇದಾಗಿದೆ.

ಭಾರತದಿಂದಲೇ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಯೋಜನೆಯಡಿಯಲ್ಲಿ ಈ ಡಾರ್ನಿಯರ್ ವಿಮಾನಗಳನ್ನು ಖರೀದಿಸಲಾಗುತ್ತಿದೆ. ಗ್ಲಾಸ್ ಕಾಕ್‌ಪಿಟ್, ಮೆರಿಟೈಮ್ ಪೆಟ್ರೋಲ್ ರಾಡಾರ್, ಎಲೆಕ್ಟ್ರೋ-ಆಪ್ಟಿಕ್ ಇನ್‌ಫ್ರಾ-ರೆಡ್ ಡಿವೈಸ್, ಮಿಷನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಗಳನ್ನು ಈ ವಿಮಾನ ಹೊಂದಿರಲಿದೆ.

ಡಾರ್ನಿಯರ್ ವಿಮಾನಗಳ ಸೇರ್ಪಡೆಯು ಐಸಿಜಿಯ ಜವಾಬ್ದಾರಿಗಳ ಕಡಲ ಪ್ರದೇಶಗಳ ವೈಮಾನಿಕ ಕಣ್ಗಾವಲು ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಡೋರ್ನಿಯರ್ ವಿಮಾನಗಳನ್ನು ಕಾನ್ಪುರದ HAL (ಸಾರಿಗೆ ವಿಮಾನ ವಿಭಾಗ) ನಲ್ಲಿ ಸ್ಥಳೀಯವಾಗಿ ತಯಾರಿಸಲಾಗುತ್ತಿದೆ ಮತ್ತು ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಅನುಗುಣವಾಗಿ ರಕ್ಷಣೆಯಲ್ಲಿ ಆತ್ಮನಿರ್ಭರ್ತವನ್ನು ಸಾಧಿಸುವಲ್ಲಿ ಗಣನೀಯ ಕೊಡುಗೆ ನೀಡಲಿದೆ.

SCROLL FOR NEXT