ಅಜಿತ್ ಪವಾರ್ - ಶರದ್ ಪವಾರ್ 
ದೇಶ

ನಾನು ಇನ್ನೂ ದಣಿದಿಲ್ಲ, ನಿವೃತ್ತಿಯೂ ಆಗಿಲ್ಲ; ಅಜಿತ್ ಪವಾರ್ ಹೇಳಿಕೆಗೆ ಶರದ್ ಪವಾರ್ ಪ್ರತಿಕ್ರಿಯೆ

ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದ ಸಂಬಂಧಿ ಅಜಿತ್ ಪವಾರ್ ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ತಿರುಗೇಟು ನೀಡಿದ್ದಾರೆ. ನಾನು ಇನ್ನೂ ದಣಿದಿಲ್ಲ. ನಿವೃತ್ತಿಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬೈ: ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದ ಸಂಬಂಧಿ ಅಜಿತ್ ಪವಾರ್ ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಶನಿವಾರ ತಿರುಗೇಟು ನೀಡಿದ್ದಾರೆ. ನಾನು ಇನ್ನೂ ದಣಿದಿಲ್ಲ. ನಿವೃತ್ತಿಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶರದ್ ಪವಾರ್ ಅವರ ವಯಸ್ಸಿನ ಕುರಿತು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಟೀಕೆಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ ಸಿಪಿ ಮುಖ್ಯಸ್ಥರು, ನಾನು ದಣಿದಿಲ್ಲ, ಹಾಗೆಯೇ ನಿವೃತ್ತಿಯಾಗಿಲ್ಲ, ಬೆಂಕಿಯಲ್ಲಿದ್ದೇನೆ ಎಂದು ಹೇಳಿದರು. 

ಬಿಜೆಪಿ ನಾಯಕರೂ ಸಹ 75 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ ಎಂದು ಹೇಳುವ ಮೂಲಕ ತಮ್ಮ ಚಿಕ್ಕಪ್ಪ ಮತ್ತು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಕೆಳಗಿಳಿದು ಹೊಸ ಪೀಳಿಗೆಗೆ ಅವಕಾಶ ನೀಡಬೇಕು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಹೇಳಿದ್ದರು.

‘ಮೊರಾರ್ಜಿ ದೇಸಾಯಿ ಅವರು ಯಾವ ವಯಸ್ಸಿನಲ್ಲಿ ಪ್ರಧಾನಿ ಆದರು ಎಂಬುದು ಗೊತ್ತಿದೆಯೇ? ನಾನು ಪ್ರಧಾನಿ ಆಗಲು ಅಥವಾ ಸಚಿವನಾಗಲು ಬಯಸುವುದಿಲ್ಲ. ಜನ ಸೇವೆಯೊಂದೇ ನನ್ನ ಧ್ಯೇಯ. ನನ್ನ ವಯಸ್ಸು 82 ಅಥವಾ 92 ಆಗಿರಲಿ ನಾನು ಇನ್ನೂ ಚುರುಕಾಗಿಯೇ ಇದ್ದೇನೆ. ‘ನನಗೆ ನಿವೃತ್ತಿಯ ಸಲಹೆ ನೀಡಲು ಅವರು ಯಾರು? ನಾನು ಇನ್ನೂ ದುಡಿಯಬಲ್ಲೆ’ ಎಂದು ಗುಡುಗಿದರು.

ತಮ್ಮ ಪುತ್ರನಲ್ಲ ಎಂಬ ಕಾರಣಕ್ಕೆ ನನ್ನನ್ನು ಶರದ ಕಡೆಗಣಿಸಿದರು ಎಂಬ ಅಜಿತ್‌ ಪವಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಜಿತ್‌ ಪವಾರ್‌ ಅವರು ಮಂತ್ರಿ, ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ ಮಗಳು ಸುಪ್ರಿಯಾ ಸುಳೆಗೆ ಯಾವುದೇ ಮಂತ್ರಿ ಹುದ್ದೆ ನೀಡಿಲ್ಲ  ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ