ದೇಶ

ದೇಶದಲ್ಲಿ ರಸ್ತೆ ಸುರಕ್ಷತೆ: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ದೇಶದಲ್ಲಿ ರಸ್ತೆ ಸುರಕ್ಷತೆ ವಿಷಯ ಕುರಿತಾದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ, ಕೋರಿದ ಪರಿಹಾರಗಳನ್ನು ನ್ಯಾಯಾಂಗವಾಗಿ ಒಂದು ಅರ್ಜಿಯಲ್ಲಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಮನವಿಯಲ್ಲಿ ಪ್ರಸ್ತಾಪಿಸಲಾದ ಹೆಚ್ಚಿನ ವಿಷಯಗಳು ತಮಿಳುನಾಡಿಗೆ ಸಂಬಂಧಿಸಿವೆ. ಅರ್ಜಿದಾರರು ಸೂಕ್ತ ಪರಿಹಾರಕ್ಕಾಗಿ ರಾಜ್ಯ ಹೈಕೋರ್ಟ್ ನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ದಕ್ಷಿಣ ರಾಜ್ಯದ ನಿವಾಸಿಯಾಗಿರುವ ಅರ್ಜಿದಾರರು, ರಸ್ತೆ ಸುರಕ್ಷತೆಯ ಬಗ್ಗೆ ದೇಶದಲ್ಲಿ ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. 

ರಸ್ತೆ ಅಪಘಾತ ಪ್ರಕರಣಗಳಲ್ಲಿ ಒಂದೇ ಸ್ಥಳದಲ್ಲಿ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಹೇಳಿದಾಗ, ಅಪಘಾತ ಪ್ರಕರಣಗಳನ್ನು ಸಂಘಟಿತವಾಗಿ ಸುವ್ಯವಸ್ಥಿತಗೊಳಿಸಲಾಗಿದೆ. ನೀವು ಒಳ್ಳೆಯ ಉದ್ದೇಶವನ್ನು ಹೊಂದಿರಬಹುದು ಆದರೆ ನ್ಯಾಯಾಂಗವಾಗಿ ಒಂದು ಅರ್ಜಿಯಲ್ಲಿ ಇದನ್ನು ಮಾಡಲಾಗುವುದಿಲ್ಲ ಎಂದು ಪೀಠವು ಹೇಳಿದೆ.

ಅರ್ಜಿದಾರರು ತಮಿಳುನಾಡು ರಾಜ್ಯಕ್ಕೆ ನಿರ್ದಿಷ್ಟವಾಗಿ ಸ್ವಲ್ಪ ಪರಿಹಾರವನ್ನು ಬಯಸಿದರೆ, ಅವರು ಹೈಕೋರ್ಟ್ ನ್ನು ಸಂಪರ್ಕಿಸಬಹುದು ಎಂದರು.

SCROLL FOR NEXT