ಪ್ರಧಾನಿ ನರೇಂದ್ರ ಮೋದಿ 
ದೇಶ

ಕಾಂಗ್ರೆಸ್ ಎಂದರೆ 'ಲೂಟ್ ಕಿ ದುಕಾನ್' ಮತ್ತು 'ಜೂತ್ ಕಾ ಬಜಾರ್': ಪ್ರಧಾನಿ ನರೇಂದ್ರ ಮೋದಿ

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪಕ್ಷವನ್ನು 'ಲೂಟ್ ಕಿ ದುಕಾನ್' (ಲೂಟಿಯ ಅಂಗಡಿ) ಮತ್ತು 'ಝೂತ್ ಕಾ ಬಜಾರ್' (ಸುಳ್ಳಿನ ಮಾರುಕಟ್ಟೆ) ಎಂದು ಕರೆದರು ಮತ್ತು ಈ ಬಾರಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುತ್ತದೆ ಎಂಬುದು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಜೈಪುರ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಪಕ್ಷವನ್ನು 'ಲೂಟ್ ಕಿ ದುಕಾನ್' (ಲೂಟಿಯ ಅಂಗಡಿ) ಮತ್ತು 'ಝೂತ್ ಕಾ ಬಜಾರ್' (ಸುಳ್ಳಿನ ಮಾರುಕಟ್ಟೆ) ಎಂದು ಕರೆದರು ಮತ್ತು ಈ ಬಾರಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುತ್ತದೆ ಎಂಬುದು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಭ್ರಷ್ಟಾಚಾರ, ಅಪರಾಧ ಮತ್ತು ತುಷ್ಟೀಕರಣದ ರಾಜಕೀಯದ ವಿಚಾರಕ್ಕೆ ಬಂದಾಗ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವು ಹೊಸ ಛಾಪನ್ನು ರೂಪಿಸಿಕೊಂಡಿದೆ ಎಂದು ಪ್ರಧಾನಿ ಆರೋಪಿಸಿದರು.

ಇಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಜಲ ಜೀವನ್ ಮಿಷನ್ ಅನುಷ್ಠಾನದಲ್ಲಿ ರಾಜಸ್ಥಾನ ಅಗ್ರಸ್ಥಾನದಲ್ಲಿರಬೇಕಿತ್ತು. ಆದರೆ, ಇಂದು ಅದು ಹಿಂದುಳಿದ ರಾಜ್ಯಗಳಲ್ಲಿ ಒಂದಾಗಿದೆ. 'ಮಹಿಳೆಯರ ಮೇಲಿನ ಅಪರಾಧದ ವಿಷಯದಲ್ಲಿ, ಅತ್ಯಾಚಾರ ಪ್ರಕರಣಗಳಲ್ಲಿ ರಾಜಸ್ಥಾನವು ಅಗ್ರಸ್ಥಾನದಲ್ಲಿದೆ. ಇಲ್ಲಿ ರಕ್ಷಕರು ಭಕ್ಷಕರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಇಡೀ ಸರ್ಕಾರವು ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ರಕ್ಷಿಸುವಲ್ಲಿ ನಿರತವಾಗಿದೆ' ಎಂದು ದೂರಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿದರೆ ಅದು ದೇಶವನ್ನು ಟೊಳ್ಳು ಮಾಡುತ್ತದೆ ಮತ್ತು ಅಧಿಕಾರದಿಂದ ಹೊರನಡೆದಾಗ ಅದು ನಿಂದಿಸುವ ಮೂಲಕ ದೇಶಕ್ಕೆ ಹಾನಿಯುಂಟುಮಾಡುತ್ತದೆ. ಅವರ ನಾಯಕರು ವಿದೇಶಕ್ಕೆ ಹೋಗಿ ಭಾರತವನ್ನು ನಿಂದಿಸುತ್ತಾರೆ ಎಂದು ಹೇಳಿದರು.

'ಕಾಂಗ್ರೆಸ್‌ಗೆ ಒಂದೇ ಒಂದು ಅರ್ಥವಿದೆ. ಅದು 'ಲೂಟ್ ಕಿ ದುಕಾನ್' ಮತ್ತು 'ಝೂತ್ ಕಾ ಬಜಾರ್' ಎಂದ ಅವರು, 'ನಫರತ್ ಕಾ ಬಜಾರ್'ನಲ್ಲಿ 'ಮೊಹಬ್ಬತ್ ಕಿ ದುಕಾನ್' (ಧ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಅನ್ನು ತೆರೆಯುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಸ್ಪಷ್ಟ ತಿರುಗೇಟು ನೀಡಿದರು. 

ರಾಜಸ್ಥಾನ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಿದೆ ಮತ್ತು ಹೀಗಿರುವಾಗ ಅಧಿಕಾರದಲ್ಲಿರುವವರನ್ನು ಪದಚ್ಯುತಗೊಳಿಸಲು ಸಮಯ ತೆಗೆದುಕೊಳ್ಳುವುದಿಲ್ಲ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋಲು ಎಷ್ಟು ಖಚಿತವಾಗಿದೆ ಎಂದರೆ ಅದರ ಸರ್ಕಾರವು ಈಗಾಗಲೇ 'ಬೈ-ಬೈ ಮೋಡ್' ಅನ್ನು ಪ್ರವೇಶಿಸಿದೆ ಎಂದು ಮೋದಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು