ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಸೋಮವಾರ ಅಮರನಾಥ ಯಾತ್ರಾರ್ಥಿಯೊಬ್ಬರು ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ 59 ವರ್ಷದ ಸತೀಶ್ ಸೂರ್ಯವಂಶಂ ಎಂದು ಗುರುತಿಸಲಾಗಿದೆ.
ಯಾತ್ರಿ ನಿವಾಸ ಚಂದರಕೋಟೆಯಲ್ಲಿ ಅವರು ಎದೆನೋವು ಎಂದು ಹೇಳಿದಾಗ ಅಲ್ಲಿಯೇ ಇದ್ದ ಪರಿಶೀಲನೆ ನಡೆಸಿದ್ದು, ಪ್ರಥಮ ಚಿಕಿತ್ಸೆಯ ನಂತರ, ವಿಶೇಷ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರಾಂಬನ್‌ಗೆ ಸ್ಥಳಾಂತರಿಸಲು ಹೇಳಲಾಗಿತ್ತು. ಆದರೆ ಅವರು ಅಲ್ಲಿಯೇ ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ಅವರು ಹೇಳಿದರು. ತೀವ್ರ ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಪ್ರತಿಕೂಲ ಹವಾಮಾನದಿಂದಾಗಿ ಶುಕ್ರವಾರದಿಂದ 6,000 ಕ್ಕೂ ಹೆಚ್ಚು ಯಾತ್ರಿಕರು ಚಂದ್ರಕೋಟೆ ಯಾತ್ರಿ ನಿವಾಸದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಭೂಕುಸಿತ ಹಾಗೂ ಪಂಥಿಯಾಲ್ ಸುರಂಗ ರಸ್ತೆ ಕೊಚ್ಚಿಕೊಂಡು ಹೋಗುವುದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಮುಚ್ಚಲ್ಪಟ್ಟಿದೆ.
ಜುಲೈ 1 ರಂದು ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿ ಯಾತ್ರೆ ಪ್ರಾರಂಭವಾದಾಗಿನಿಂದ ಜಮ್ಮು ಪ್ರದೇಶದಲ್ಲಿ ಸಾವನ್ನಪ್ಪಿದವರ ಪೈಕಿ ಅಮರನಾಥ ಯಾತ್ರಿಕ ಸೂರ್ಯವಂಶಮ್ ಮೂರನೇಯವರಾಗಿದ್ದಾರೆ. ಯಾತ್ರೆಯ ಸಮಯದಲ್ಲಿ ಕಾಶ್ಮೀರದಿಂದ ಒಂಬತ್ತು ಸಾವುಗಳು ವರದಿಯಾಗಿವೆ.