ದೇಶ

ಮಣಿಪುರ ಹಿಂಸಾಚಾರ: ಪಶ್ಚಿಮ ಕಾಂಗ್‌ಪೊಕ್ಪಿಯಲ್ಲಿ ಪೊಲೀಸ್ ಸಿಬ್ಬಂದಿ ಹತ್ಯೆ, 10 ಮಂದಿಗೆ ಗಾಯ

Ramyashree GN

ಇಂಫಾಲ: ಮಣಿಪುರದ ಪಶ್ಚಿಮ ಕಾಂಗ್‌ಪೊಕ್ಪಿ ಪ್ರದೇಶದಲ್ಲಿ ರಾತ್ರೋರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆ ನಂತರ ಸೋಮವಾರ ಒಬ್ಬ ಪೊಲೀಸ್ ಮೃತಪಟ್ಟು ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ 3 ರಿಂದ 6 ಗಂಟೆಯ ನಡುವೆ ಸ್ವಲ್ಪ ಸಮಯದ ವಿರಾಮವಿತ್ತು. ಆದರೆ, ಅದರ ನಂತರ ಫಯೆಂಗ್ ಮತ್ತು ಸಿಂಗ್ಡಾ ಗ್ರಾಮಗಳಿಂದ ವಿವೇಚನಾರಹಿತ ಗುಂಡಿನ ಸದ್ದು ಕೇಳಿಸಿತು.

ಕಾಂಗ್‌ಪೋಕ್ಪಿ ಜಿಲ್ಲೆಯ ಕಾಂಗ್‌ಚುಪ್ ಪ್ರದೇಶದ ಹಳ್ಳಿಗಳು ಮತ್ತು ಬೆಟ್ಟಗಳ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂ ರೈಫಲ್ಸ್ ಎರಡು ಹಳ್ಳಿಗಳ ನಡುವೆ ಬಫರ್ ವಲಯವನ್ನು ನಿರ್ವಹಿಸುತ್ತದೆ.

ಎರಡೂ ಕಡೆಯಿಂದ ಹೆಚ್ಚಿನ ಸಾವು ನೋವು ಸಂಭವಿಸಿರುವ ಸಾಧ್ಯತೆಯಿದ್ದು, ಗುಂಡಿನ ದಾಳಿ ಕೊನೆಗೊಂಡ ನಂತರವೇ ನಿಖರವಾದ ಚಿತ್ರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 3ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಕನಿಷ್ಠ 150 ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಐಕ್ಯತಾ ಮೆರವಣಿಗೆ' ಆಯೋಜಿಸಲಾಗಿತ್ತು.

ಮಣಿಪುರದ ಜನಸಂಖ್ಯೆಯ ಶೇ 53ರಷ್ಟಿರುವ ಮೇಟಿ ಸಮುದಾಯದ ಜನರು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇ 40 ರಷ್ಟಿದ್ದು, ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

SCROLL FOR NEXT