ಸಾಂದರ್ಭಿಕ ಚಿತ್ರ 
ದೇಶ

ಭಾರತದ 14 ರಾಜ್ಯಗಳಿಗೆ ಪ್ರವಾಹವನ್ನು ಉತ್ತಮವಾಗಿ ತಡೆದುಕೊಳ್ಳುವ ಶಕ್ತಿ ಇದೆ: ಅಧ್ಯಯನದ ವರದಿ

ಇಂಧನ, ಪರಿಸರ ಮತ್ತು ನೀರು ಮಂಡಳಿ (CEEW) ಮೊನ್ನೆ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳ ಲಭ್ಯತೆ, ಪ್ರವೇಶ ಮತ್ತು ಪರಿಣಾಮಕಾರಿತ್ವದಿಂದಾಗಿ ಭಾರತದ 14 ರಾಜ್ಯಗಳು ಪ್ರವಾಹವನ್ನು ಎದುರಿಸುವ ಶಕ್ತಿಯನ್ನು ಹೊಂದಿವೆ. 

ಬೆಂಗಳೂರು: ಇಂಧನ, ಪರಿಸರ ಮತ್ತು ನೀರು ಮಂಡಳಿ ( CEEW) ಮೊನ್ನೆ ಗುರುವಾರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳ ಲಭ್ಯತೆ, ಪ್ರವೇಶ ಮತ್ತು ಪರಿಣಾಮಕಾರಿತ್ವದಿಂದಾಗಿ ಭಾರತದ 14 ರಾಜ್ಯಗಳು ಪ್ರವಾಹವನ್ನು(flood) ಎದುರಿಸುವ ಶಕ್ತಿಯನ್ನು ಹೊಂದಿವೆ. 

ಅಸ್ಸಾಂ, ಒಡಿಶಾ, ಸಿಕ್ಕಿಂ, ಉತ್ತರ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಮತ್ತು ಕೇರಳ ರಾಜ್ಯಗಳು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ತಂತ್ರಜ್ಞಾನದೊಂದಿಗೆ ಭಾರತದ ವಿಪತ್ತು ಸಿದ್ಧತೆಯನ್ನು ಬಲಪಡಿಸುವುದು: ಪರಿಣಾಮಕಾರಿ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳಿಗಾಗಿ'-‘Strengthening India’s Disaster Preparedness with Technology: A Case for Effective Early Warning Systems’, ಎಂಬ ಶೀರ್ಷಿಕೆಯ ವರದಿಯು, ದೇಶವು ಇತ್ತೀಚೆಗೆ ಪ್ರವಾಹಗಳು ಮತ್ತು ಚಂಡಮಾರುತಗಳಂತಹ ಹವಾಮಾನ ವೈಪರೀತ್ಯಗಳನ್ನು ಅನುಭವಿಸುತ್ತಿರುವುದರಿಂದ ವಿಪರೀತ ಹವಾಮಾನದಿಂದ ಉಂಟಾಗಬಹುದಾಗ ಪ್ರವಾಹ ಮತ್ತು ಚಂಡಮಾರುತಗಳಂತಹ ಪ್ರಾಕೃತಿಕ ವಿಕೋಪಗಳನ್ನು ಸಹಿಸುವ ಶಕ್ತಿಯನ್ನು ಹೊಂದಿವೆ. ಈ ವರ್ಷದ ಭಾರತದ G20 ಪ್ರೆಸಿಡೆನ್ಸಿ ಅಡಿಯಲ್ಲಿ ಇವುಗಳು ಪ್ರಮುಖ ಚರ್ಚಾ ಕೇಂದ್ರಿತ ವಿಷಯಗಳಾಗಿವೆ.

ದೇಶದಲ್ಲಿನ ಶೇಕಡಾ 100ರಷ್ಟು ಜನಸಂಖ್ಯೆಗೆ ಸೈಕ್ಲೋನ್ ಎಚ್ಚರಿಕೆಗಳು ಲಭ್ಯವಿವೆ ಎಂದು ವರದಿಯು ಹೇಳುತ್ತದೆ. ಆಂಧ್ರ ಪ್ರದೇಶ, ಒಡಿಶಾ, ಗೋವಾ, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳದಂತಹ ಕರಾವಳಿ ರಾಜ್ಯಗಳು ಪರಿಣಾಮಕಾರಿ ಸೈಕ್ಲೋನ್ ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿವೆ. ಬೆಚ್ಚಗಿನ ಸಾಗರಗಳೊಂದಿಗೆ ಚಂಡಮಾರುತಗಳು ಆವರ್ತನದಲ್ಲಿ ಹೆಚ್ಚಾದಂತೆ, ಈ ಚಂಡಮಾರುತಗಳ ಹಾದಿಯಲ್ಲಿರುವ ಒಳನಾಡಿನ ರಾಜ್ಯಗಳು ಸಹ ತಡೆಯುವ ಬಲಪಡಿಸುವ ಅಗತ್ಯವಿದೆ.

2021 ರ ಅಧ್ಯಯನವು 27 ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತೀವ್ರವಾದ ಜಲ-ವಿಪತ್ತುಗಳಿಗೆ ಮತ್ತು ಅವುಗಳ ಸಂಯುಕ್ತ ಪರಿಣಾಮಗಳಿಗೆ ಗುರಿಯಾಗುತ್ತವೆ ಎಂದು ಕಂಡುಹಿಡಿದಿದೆ. 2021 ರಲ್ಲಿ ಮಾತ್ರ ತೀವ್ರ ಪ್ರವಾಹ ಮತ್ತು ಚಂಡಮಾರುತದ ಘಟನೆಗಳಿಂದ ದೇಶವು 62,000 ಕೋಟಿ ರೂಪಾಯಿ ಮೌಲ್ಯದಷ್ಟು ಆಸ್ತಿಪಾಸ್ತಿ ಹಾನಿಯುಂಟಾಗಿದೆ. 

ಪ್ರಸ್ತುತ, ಭಾರತದ ಸೈಕ್ಲೋನ್ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು ಪ್ರವಾಹಕ್ಕಿಂತ ಹೆಚ್ಚು ದೃಢವಾಗಿವೆ. ಆದರೆ ಪ್ರತಿ ರಾಜ್ಯವು ಹವಾಮಾನ ವೈಪರೀತ್ಯಗಳ ಆವರ್ತನ ಮತ್ತು ತೀವ್ರತೆಯ ಹೆಚ್ಚಳವನ್ನು ಎದುರಿಸುತ್ತಿರುವುದರಿಂದ, ಎಲ್ಲರಿಗೂ ಪರಿಣಾಮಕಾರಿ ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ನಿರ್ಮಿಸುವುದು ಮುಖ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.

CEEW ಅಧ್ಯಯನವು ಪ್ರವಾಹಗಳು ಮತ್ತು ಚಂಡಮಾರುತಗಳಿಗೆ ದೃಢವಾಗಿ ಎದುರಿಸುವ ಆರಂಭಿಕ ಎಚ್ಚರಿಕೆ ವ್ಯವಸ್ಥೆಗಳ ಲಭ್ಯತೆ (ಮುಂಚಿನ ಎಚ್ಚರಿಕೆ ಕೇಂದ್ರಗಳ ಉಪಸ್ಥಿತಿ), ಪ್ರವೇಶ (ಫೋನ್‌ಗಳು ಸೇರಿದಂತೆ ಮಾಹಿತಿಯ ಪ್ರವೇಶವನ್ನು ಹೊಂದಿರುವ ಜನರ ಪಾಲು) ಮತ್ತು ಪರಿಣಾಮಕಾರಿತ್ವ (ಆಡಳಿತ ಮತ್ತು ಹಣಕಾಸಿನ ಚೌಕಟ್ಟುಗಳ ಉಪಸ್ಥಿತಿ)ಯನ್ನು ಲೆಕ್ಕಚಾರ ಹಾಕಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT