ಡಿಸಿಎಂ ಅಜಿತ್ ಪವಾರ್ ಮತ್ತಿತರರು 
ದೇಶ

ಮುಂಬೈ: ಎನ್ ಸಿಪಿ ಸಚಿವರು, ಶಾಸಕರೊಂದಿಗೆ ಅಜಿತ್- ಶರದ್ ಪವಾರ್ ಭೇಟಿ!

ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಂದು ತನ್ನ ಬಣದ ಸಚಿವರು, ಶಾಸಕರೊಂದಿಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಮುಂಬೈನ ವೈಬಿ ಚವಾಣ್ ಸೆಂಟರ್‌ ಗೆ ತೆರಳಿದ್ದಾರೆ.

ಮುಂಬೈ: ಕುತೂಹಲಕಾರಿ ವಿದ್ಯಮಾನವೊಂದರಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರಿಂದು ತನ್ನ ಬಣದ ಸಚಿವರು, ಶಾಸಕರೊಂದಿಗೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಲು ಮುಂಬೈನ ವೈಬಿ ಚವಾಣ್ ಸೆಂಟರ್‌ ಗೆ ತೆರಳಿದ್ದಾರೆ.

ತನ್ನ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದು ಜುಲೈ 2 ರಂದು ಏಕನಾಥ್ ಶಿಂಧೆ ಸರ್ಕಾರ ಸೇರಿದ ನಂತರ ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ಗುಂಪಿನ ನಡುವಿನ ಮೊದಲ ಸಭೆ ಇದಾಗಿದೆ.

ಅಜಿತ್ ಪವಾರ್ ಜೊತೆಗೆ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಅದಿತಿ ತತ್ಕರೆ, ಹಸನ್ ಮಶ್ರಿಫ್ ಮತ್ತು ಇತರ ಶಾಸಕರು ಶರದ್ ಪವಾರ್ ಅವರನ್ನು ಭೇಟಿ ಮಾಡಲು ಕೇಂದ್ರವನ್ನು ತಲುಪಿದ್ದಾರೆ. ಶರದ್ ಪವಾರ್ ಬಣದ ಮುಖಂಡರಾದ ಜಯಂತ್ ಪಾಟೀಲ್ ಮತ್ತು ಜಿತೇಂದ್ರ ಅವ್ಹಾದ್ ಕೂಡ ವೈ.ಬಿ.ಚವಾಣ್ ಕೇಂದ್ರಕ್ಕೆ ಧಾವಿಸಿದ್ದಾರೆ.

ಶೀಘ್ರದಲ್ಲೇ ವೈ.ಬಿ. ಚವಾಣ್ ಕೇಂದ್ರಕ್ಕೆ ಬರುವಂತೆ ಸುಪ್ರಿಯಾ ಸುಳೆ ಅವರಿಂದ  ಕರೆ ಬಂದಿತು, ಅಜಿತ್ ಪವಾರ್ ಮತ್ತು ಇತರ ಶಾಸಕರು ಇಲ್ಲಿಗೆ ಏಕೆ ಬಂದಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಪಾಟೀಲ್ ಹೇಳಿದರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕಾ–ಇರಾನ್ ಶಾಂತಿ ಮಾತುಕತೆ ವಿಫಲ: ಷೇರು ಮಾರುಕಟ್ಟೆ ಮೇಲೆ ಪರಿಣಾಮ; ಸೆನ್ಸೆಕ್ಸ್ 1600 ಅಂಕ ಕುಸಿತ, ತೈಲ ಬೆಲೆ ಏರಿಕೆ..!

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

ನೀವು ಪೋಪ್ ಆಗಲು ನಾನು ಕಾರಣ, ರಾಜಕಾರಣ ಬಿಟ್ಟು ಧರ್ಮಗುರುವಿನ ಕೆಲಸ ಮಾಡಿ: ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ

ಕಾಂಗ್ರೆಸ್‌ನಲ್ಲಿ ಕುರ್ಚಿ ಕಸರತ್ತು: ದೆಹಲಿಗೆ 'ಕೈ' ಶಾಸಕರ ಪ್ರಯಾಣ, ಸಚಿವ ಸ್ಥಾನಕ್ಕಾಗಿ ಲಾಬಿ..!

'ಕೆಲವು ಸಚಿವರು ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ: ದೇವಲೋಕದಿಂದ ಬಂದಂತೆ ಆಡ್ತಾರೆ; ಅಂತವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಿ'

SCROLL FOR NEXT