ದೇಶ

ದೂದ್ ಸಾಗರ್ ನೋಡಲು ಬಂದ ಪ್ರವಾಸಿಗರಿಗೆ ಬಸ್ಕಿ ಶಿಕ್ಷೆ, ವಿಡಿಯೋ ವೈರಲ್!

Vishwanath S

ಪಣಜಿ: ದೂದ್ ಸಾಗರ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಂದು ಬಂದ ಪ್ರವಾಸಿಗರಿಗೆ ಸಂಕಷ್ಟ ಎದುರಾಗಿತ್ತು.

ಗೋವಾ ಸರ್ಕಾರ ದೂದ್ ಸಾಗರ್ ಜಲಪಾತ ವೀಕ್ಷಣೆ ಹಾಗೂ ಆ ಪ್ರದೇಶದಲ್ಲಿ ಟ್ರೆಕಿಂಗ್ ಗೆ ನಿಷೇಧ ಹೇರಿ ಇಂದು ಆದೇಶ ಹೊರಡಿಸಿದೆ. ಇದು ತಿಳಿಯದೆ ಕರ್ನಾಟಕದ ಸಾವಿರಾರು ಯುವಕರು ಅಲ್ಲಿಗೆ ತೆರಳಿದ್ದರು. ಆದರೆ ಮಧ್ಯದಲ್ಲೇ ಅವರನ್ನು ತಡೆದ ಪೊಲೀಸರು ಬಸ್ಕಿ ಹೊಡೆಸಿ ವಾಪಸ್ ಕಳಿಸಿದ್ದಾರೆ.

ನಿಯಮ ಉಲ್ಲಂಘಿಸಿ ಚಾರಣಕ್ಕೆ ತೆರಳಿದ ಪ್ರವಾಸಿಗರ ಗುಂಪುಗಳನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ಶಿಕ್ಷೆಯಾಗಿ ಬಸ್ಕಿ ಹೊಡೆಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಮಳೆಗಾಲದಲ್ಲಿ ದೂದ್ ಸಾಗರ್‌ ಮೈದುಂಬಿ ಹರಿಯುತ್ತದೆ. ಹೀಗಾಗಿ ಅದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಈ ಬಾರಿ ಗೋವಾ ಸರ್ಕಾರದ ನಿರ್ಧಾರದಿಂದ ಪ್ರವಾಸಿಗರಿಗೆ ನಿರಾಶೆ ಮೂಡಿದೆ.

SCROLL FOR NEXT