ಸಾಂದರ್ಭಿಕ ಚಿತ್ರ 
ದೇಶ

ದೇಶ ವಿರೋಧಿ ಚಟುವಟಿಕೆ: ಕಾಶ್ಮೀರ ವಿವಿ ಪಿಆರ್ ಒ ಸೇರಿ ಮೂವರು ಸರ್ಕಾರಿ ನೌಕರರ ವಜಾ

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತ, ಕಾಶ್ಮೀರ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿಆರ್‌ಒ) ಮತ್ತು ಓರ್ವ ಪೊಲೀಸ್ ಸೇರಿದಂತೆ ಮೂವರು...

ಶ್ರೀನಗರ: ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಆಡಳಿತ, ಕಾಶ್ಮೀರ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿಆರ್‌ಒ) ಮತ್ತು ಓರ್ವ ಪೊಲೀಸ್ ಸೇರಿದಂತೆ ಮೂವರು ಸರ್ಕಾರಿ ನೌಕರರನ್ನು ಸೋಮವಾರ ವಜಾಗೊಳಿಸಿದ್ದಾರೆ.

ವಜಾಗೊಂಡ ಮೂವರು ಉದ್ಯೋಗಿಗಳನ್ನು ಕಾಶ್ಮೀರ ವಿಶ್ವವಿದ್ಯಾಲಯದ ಪಿಆರ್‌ಒ ಫಹೀಮ್ ಅಸ್ಲಾಂ, ಗ್ರಾಮೀಣಾಭಿವೃದ್ಧಿ ಇಲಾಖೆ ಉದ್ಯೋಗಿ ಮುರಾವತ್ ಹುಸೇನ್ ಮಿರ್ ಮತ್ತು ಕಾನ್‌ಸ್ಟೆಬಲ್ ಅರ್ಷಿದ್ ಅಹ್ಮದ್ ಥೋಕರ್ ಎಂದು ಗುರುತಿಸಲಾಗಿದೆ.

ಪ್ರತ್ಯೇಕತಾವಾದಿ ಅಜೆಂಡಾವನ್ನು ಮುಂದುವರಿಸಿದ ಆರೋಪದ ಮೇಲೆ ಈ ಮೂವರು ನೌಕರರ ವಿರುದ್ಧ ಸಂವಿಧಾನದ ಸೆಕ್ಷನ್311(2) ಅನ್ನು ಅನ್ವಯಿಸುವ ಮೂಲಕ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ.

ವಿಶೇಷ ಕಾರ್ಯಪಡೆ(STF)ಯ ಶಿಫಾರಸಿನ ಮೇರೆಗೆ ಈ ಮೂವರು ನೌಕರರನ್ನು ವಜಾಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ತಿಳಿಸಿದೆ.

ಇದಕ್ಕೂ ಮೊದಲು, ಕಳೆದ ವರ್ಷ ಮೇ ತಿಂಗಳಲ್ಲಿ ಕಾಶ್ಮೀರ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅಲ್ತಾಫ್ ಹುಸೇನ್ ಪಂಡಿತ್ ಅವರನ್ನು ಸಂವಿಧಾನದ ಸೆಕ್ಷನ್ 311 (2) ಅನ್ನು ಅನ್ವಯಿಸುವ ಮೂಲಕ ವಜಾಗೊಳಿಸಲಾಗಿತ್ತು.

ಭಾರತ ಸಂವಿಧಾನದ 311(2)ನೇ ವಿಧಿಯ ನಿಬಂಧನೆಗಳನ್ನು ಅನ್ವಯಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಮೇಲೆ ಕಾಶ್ಮೀರ ಸರ್ಕಾರವು ಇದುವರೆಗೆ 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರಿಸ್ಥಿತಿ ಬದಲಾಗದಿದ್ದರೆ ದಶಕಗಳ ಪರಿಶ್ರಮ ವ್ಯರ್ಥ, ಮತ್ತೆ ಭಾರಿ ಬಡತನ ಮರಳಬಹುದು: ಪ್ರಧಾನಿ ಮೋದಿ ಎಚ್ಚರಿಕೆ

'ಪ್ರವಾಸ ಯಶಸ್ವಿ, ಆದ್ರೆ ನಾವು ಅವ್ರನ್ನ ನಂಬಲ್ಲ'! ಚೀನಾ ಕೊಟ್ಟಿದ್ದ ಬ್ಯಾಡ್ಜ್, ಉಡುಗೊರೆಗಳನ್ನು ಕಸದ ಬುಟ್ಟಿಗೆ ಎಸೆದ ಟ್ರಂಪ್ ಟೀಮ್!

IPL 2026: ಪ್ಲೇಆಫ್​ ಎಂಟ್ರಿಗೆ RCB ಸಿದ್ಧತೆ; PBKS​ಗೆ ಮಾಡು ಇಲ್ಲವೇ ಮಡಿ ಪಂದ್ಯ

ಬೆಂಗಳೂರಿಗೆ ವರುಣಾಘಾತ: ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ; ಯೆಲ್ಲೋ ಅಲರ್ಟ್‌ ಘೋಷಿಸಿದ IMD

ತಮಿಳುನಾಡು: ಸೆಂಗೋಟ್ಟಯನ್ ಗೆ ಹಣಕಾಸು, ಕೀರ್ತನಾಗೆ ಕೈಗಾರಿಕೆ.. ಗೃಹ ಇಲಾಖೆ ತಾವೇ ಉಳಿಸಿಕೊಂಡ ಸಿಎಂ ಜೊಸೆಫ್ ವಿಜಯ್! ಯಾರಿಗೆ ಯಾವ ಇಲಾಖೆ? ಇಲ್ಲಿದೆ ಮಾಹಿತಿ

SCROLL FOR NEXT