ದೇಶ

ಮಣಿಪುರ ವಿಡಿಯೋದ ಆರೋಪಿ ತಕ್ಷಣ ಬಂಧನ, ಆದರೆ ಹಳೆಯ ಎಫ್ಐಆರ್ ನಲ್ಲಿ ಕರ್ತವ್ಯ ಲೋಪ ಪತ್ತೆ: ಸಿಎಂ ಬಿರೇನ್

Srinivas Rao BV

ಇಂಫಾಲ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲುಗೊಳಿಸಿ ಪರೇಡ್ ಮಾಡಿ ಅತ್ಯಾಚಾರವೆಸಗಿರುವ ಘಟನೆಯ ವೀಡಿಯೋದಲ್ಲಿರುವ ಪ್ರಮುಖ ಆರೋಪಿಯನ್ನು ತಕ್ಷಣವೇ ಬಂಧಿಸಲಾಗಿದೆ. ಆದರೆ ಹಳೆಯ ಎಫ್ಐಆರ್ ನಲ್ಲಿ ಕರ್ತವ್ಯ ಲೋಪ ಪತ್ತೆಯಾಗಿದೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ. 

ಮಣಿಪುರದಲ್ಲಿನ ಹಿಂಸಾಚಾರದ ಬೆನ್ನಲ್ಲೆ ನಡೆದಿದ್ದ  2 ತಿಂಗಳು ಹಳೆಯದಾದ ಘಟನೆಯ ವೀಡೀಯೋ ಬಗ್ಗೆ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗತೊಡಗಿದ್ದು,  ಹಿಂಸಾಚಾರ ತಡೆಯಲು ವಿಫಲವಾದ ಸರ್ಕಾರದ ವಿರುದ್ಧವೂ ಆಕ್ರೋಶ ವ್ಯಕ್ತವಾಗುತ್ತಿದೆ. 

ಈ ವರೆಗೂ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ. 

ಘಟನೆಯನ್ನು ಖಂಡಿಸಿ ಸಿಎಂ ರಾಜೀನಾಮೆಗೆ ಒತ್ತಡ ಹೆಚ್ಚುತ್ತಿದ್ದು, ಮೌನ ಮುರಿದಿರುವ ಬಿರೇನ್ ಸಿಂಗ್ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ವಿಡಿಯೋ ವೈರಲ್ ಆದ ಬೆನ್ನಲ್ಲೆ ಆರೋಪಿಯನ್ನು ಬಂಧಿಸಿದ್ದಾರೆ. ಇಂತಹ ಹೇಯ ಕೃತ್ಯದ ಬಗ್ಗೆ ಸರ್ಕಾರ ಸುಮ್ಮನಿರುವುದಿಲ್ಲ. ಅಪರಾಧಿಗಳಿಗೆ, ಮರಣದಂಡನೆಯಂತಹ ಕಠಿಣ ಶಿಕ್ಷೆ ಸಿಗುವಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಬಿರೇನ್ ಸಿಂಗ್ ಹೇಳಿದ್ದಾರೆ.

SCROLL FOR NEXT