ದೇಶ

ಮೊಬೈಲ್ ಗೀಳು: ಪೋಷಕರು ಗದರಿದ್ದಕ್ಕೆ ಜಲಪಾತಕ್ಕೆ ಹಾರಿದ ಬಾಲಕಿ- ವಿಡಿಯೋ ವೈರಲ್

Nagaraja AB

ಛತ್ತೀಸ್ ಗಢ: ಸದಾ ಮೊಬೈಲ್ ಹಿಡಿದುಕೊಂಡು ಅದರಲ್ಲೇ ಮುಳುಗಿ ಹೋಗುತ್ತಿರುವ ಮಕ್ಕಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಮೊಬೈಲ್ ಗೀಳು ಕೆಲವೊಮ್ಮೆ ಪ್ರಾಣಕ್ಕೂ ಕುತ್ತು ತರುವ ಮಟ್ಟಿಕ್ಕೂ ಕಾರಣವಾಗುತ್ತಿದೆ.

ಇದೇ ರೀತಿ ಅತಿಯಾಗಿ ಮೊಬೈಲ್ ಬಳಸಬೇಡ ಎಂದು ಪೋಷಕರು ಹೇಳಿದ್ದಕ್ಕೆ ಬೇಸರಗೊಂಡ ಶಾಲಾ ಬಾಲಕಿಯೊಬ್ಬಳು 90 ಅಡಿ ಇರುವ ಜಲಪಾತದಿಂದ ಹಾರಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ.

ಆದರೆ, ಅದೃಷ್ಟವಶಾತ್ ಬಾಲಕಿ ಬದುಕುಳಿದಿದ್ದಾಳೆ. ಪತ್ರಕರ್ತೆ ಅನ್ನು ಸುಶ್ರೀ ಸಂಗೀತಾ ಎಂಬವರು ಈ ವಿಡಿಯೋ ವನ್ನು ಟ್ವೀಟ್ ಮಾಡಿದ್ದಾರೆ. ಮೊಬೈಲ್ ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಸ್ಮಾರ್ಟ್ ಫೋನ್ ಗಳಿಂದ ನಿಮ್ಮ ಮಕ್ಕಳನ್ನು ದೂರ ಇಡಿ ಎಂದು ಆಕೆ ಮನವಿ ಮಾಡಿದ್ದಾರೆ.

SCROLL FOR NEXT