ದೇಶ

ಮಹಾರಾಷ್ಟ್ರ: ಪ್ರವಾಹದಲ್ಲಿ ಸಿಲುಕಿರುವ 45 ಜನರನ್ನು ರಕ್ಷಿಸಲು ವಾಯುಪಡೆ ಕಾರ್ಯಾಚರಣೆ

Nagaraja AB

ಯವತ್ಮಾಲ್: ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಮಹಾಗಾಂವ್ ತಾಲೂಕಿನಲ್ಲಿ ಭಾರೀ ಮಳೆಯ ನಡುವೆ ಪ್ರವಾಹದಲ್ಲಿ ಸಿಲುಕಿರುವ 45 ಜನರನ್ನು ರಕ್ಷಿಸಲು ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಶುಕ್ರವಾರದಿಂದ ಯವತ್ಮಾಲ್‌ನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಎತ್ತರದ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಮಹಾಗಾಂವ್ ತಾಲೂಕಿನ ಆನಂದನಗರ ಗ್ರಾಮದಲ್ಲಿ ಪ್ರವಾಹದಿಂದಾಗಿ 45 ಜನರು ಸಿಲುಕಿಕೊಂಡಿದ್ದರು.  ಹೀಗಾಗಿ ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳು ಮಹಾಗಾಂವ್‌ಗೆ ತೆರಳಲಿದ್ದು,ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಮಹಾಗಾಂವ್ ತಾಲೂಕಿನಲ್ಲಿ 231 ಮಿಮೀ ಮಳೆ ದಾಖಲಾಗಿದೆ. ಯವತ್ಮಾಲ್‌ನಲ್ಲಿ ಪ್ರವಾಹದಿಂದಾಗಿ ಸಿಲುಕಿರುವ ಜನರನ್ನು ನಾಗ್ಪುರಕ್ಕೆ  ಸ್ಥಳಾಂತರಿಸಲು Mi-17 V5 ಹೆಲಿಕಾಪ್ಟರ್ ಕಳುಹಿಸಲಾಗಿದೆ ಎಂದು ರಕ್ಷಣಾ ವಿಭಾಗದ ಪಿಆರ್ ಒ ರತ್ನಾಕರ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಯವತ್ಮಾಲ್ ನಗರದಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ನಗರದ ಕೆಲವು ಭಾಗಗಳಲ್ಲಿ ಮನೆಗಳು ಮತ್ತು ರಸ್ತೆಗಳು ಜಲಾವೃತವಾಗಿವೆ.

SCROLL FOR NEXT