ಸಾಂದರ್ಭಿಕ ಚಿತ್ರ 
ದೇಶ

ಹವಾಮಾನ ಬದಲಾವಣೆ: 2022 ರಲ್ಲಿ ಭಾರತಕ್ಕೆ ಗಣನೀಯ ಆರ್ಥಿಕ ನಷ್ಟ

ಕಳೆದ ವರ್ಷ 2022ರಲ್ಲಿ ಪ್ರವಾಹ, ಬರ ಮತ್ತು ಶಾಖದ ಅಲೆ-ಸಂಬಂಧಿತ ವಿಪತ್ತುಗಳಿಂದಾಗಿ ದೇಶ ಸಾಕಷ್ಟು ನಷ್ಟ ಅನುಭವಿಸಿತ್ತು. ವಿಶ್ವ ಹವಾಮಾನ ಸಂಸ್ಥೆ ಪ್ರಕಟಿಸಿದ ಹೊಸ ವರದಿ ಪ್ರಕಾರ, ಬರ ಮತ್ತು ಶಾಖದ ಅಲೆಗಳ ನಂತರದ ಪ್ರವಾಹಕ್ಕೆ ಸಂಬಂಧಿಸಿದ ವಿಪತ್ತುಗಳಿಂದ ಭಾರತವು 4.2 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ.

ನವದೆಹಲಿ: ಕಳೆದ ವರ್ಷ 2022ರಲ್ಲಿ ಪ್ರವಾಹ, ಬರ ಮತ್ತು ಶಾಖದ ಅಲೆ-ಸಂಬಂಧಿತ ವಿಪತ್ತುಗಳಿಂದಾಗಿ ದೇಶ ಸಾಕಷ್ಟು ನಷ್ಟ ಅನುಭವಿಸಿತ್ತು. ವಿಶ್ವ ಹವಾಮಾನ ಸಂಸ್ಥೆ ಪ್ರಕಟಿಸಿದ ಹೊಸ ವರದಿ ಪ್ರಕಾರ, ಬರ ಮತ್ತು ಶಾಖದ ಅಲೆಗಳ ನಂತರದ ಪ್ರವಾಹಕ್ಕೆ ಸಂಬಂಧಿಸಿದ ವಿಪತ್ತುಗಳಿಂದ ಭಾರತವು 4.2 ಶತಕೋಟಿ ಡಾಲರ್ ನಷ್ಟ ಅನುಭವಿಸಿದೆ.

ಇದೇ ರೀತಿ ಏಷ್ಯಾ ಖಂಡದ ಇತರ ದೇಶಗಳಾದ ಪಾಕಿಸ್ತಾನ ಮತ್ತು ಚೀನಾಗಳು ಸಹ ಸಾಕಷ್ಟು ನಷ್ಟ ಅನುಭವಿಸಿದ್ದು, ಹೆಚ್ಚಿನ ವೆಚ್ಚವು ಕೃಷಿ ನಷ್ಟಕ್ಕೆ ಕಾರಣವಾಗಿದೆ.

'ದಿ ಸ್ಟೇಟ್ ಆಫ್ ಕ್ಲೈಮೇಟ್ ಇನ್ ಏಷ್ಯಾ 2022' ವರದಿಯ ಪ್ರಕಾರ, ಭಾರತದ ಗಂಗಾ ಮತ್ತು ಬ್ರಹ್ಮಪುತ್ರ ಜಲಾನಯನ ಪ್ರದೇಶಗಳು ಅತಿ ದೊಡ್ಡ ಮಳೆಯ ಕೊರತೆಯನ್ನು ಹೊಂದಿದ್ದು, ಬರ-ತರಹದ ಪರಿಸ್ಥಿತಿಗಳನ್ನು ಎದುರಿಸಿವೆ. ಈ ಜಲಾನಯನ ಪ್ರದೇಶಗಳು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಹೆಚ್ಚಿನ ಕೃಷಿ ಚಟುವಟಿಕೆ ಮೂಲಕ ಜನರ ಜೀವನೋಪಾಯಕ್ಕೆ ದಾರಿಯಾಗಿದೆ. 

ಮಧ್ಯ ಭಾರತ, ಪಶ್ಚಿಮ ಘಟ್ಟಗಳು (ಭಾರತ) ಮತ್ತು ಖಾಸಿ ಬೆಟ್ಟಗಳಲ್ಲಿ ಹೆಚ್ಚಿನ ದೈನಂದಿನ ಮಳೆಯಾಗುತ್ತಿವೆ. ಮೇ ನಿಂದ ಸೆಪ್ಟೆಂಬರ್ ವರೆಗೆ ಭಾರೀ ಮಳೆಯು ಅನೇಕ ಭೂಕುಸಿತಗಳು ಮತ್ತು ನದಿ ಉಕ್ಕಿ ಹರಿಯುವಿಕೆ ಮತ್ತು ಪ್ರವಾಹಗಳನ್ನು ಉಂಟುಮಾಡಿವೆ. ಇದರಿಂದಾಗಿ ಸಾವುನೋವುಗಳು ಮತ್ತು ಹಾನಿಗಳು ಸಂಭವಿಸಿದವು. ಪ್ರವಾಹದಿಂದ 2,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. 1.3 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿದೆ. ಇದರಿಂದ ಭಾರತದಲ್ಲಿ ಅತಿಹೆಚ್ಚು ಸಾವು ನೋವುಗಳು ಉಂಟಾಗಿವೆ.

ಪ್ರವಾಹದ ರೀತಿಯಲ್ಲಿ ಗುಡುಗು ಮಿಂಚು ಭಾರತದಲ್ಲಿ ಸಾವಿನ ಮತ್ತೊಂದು ಪ್ರಮುಖ ಕಾರಣವಾಗಿದೆ. 2022 ರಲ್ಲಿ, ಗುಡುಗು ಮತ್ತು ಮಿಂಚು ದೇಶದ ವಿವಿಧ ಭಾಗಗಳಲ್ಲಿ ಸುಮಾರು 1,200 ಜೀವಗಳನ್ನು ಬಲಿ ತೆಗೆದುಕೊಂಡಿತು. ಮೇ 19-20 ರಂದು ಬಿಹಾರದಲ್ಲಿ ಸಿಡಿಲು ಬಡಿದು 34ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

2022 ರ ಏಷ್ಯಾದ ಸರಾಸರಿ ತಾಪಮಾನವು 0.72 °C ನ ಎರಡನೇ ದಾಖಲೆಯ ಹೆಚ್ಚಳವನ್ನು ದಾಖಲಿಸಿದೆ. ಇದು 1991–2020ರ ಸರಾಸರಿಗಿಂತ ಹೆಚ್ಚಿತ್ತು. 1991-2020 ರ ಸರಾಸರಿಯು ಸ್ವತಃ 1.68 °C ಆಗಿತ್ತು, ಇದು ಹವಾಮಾನ ಬದಲಾವಣೆಗಾಗಿ WMO 1961-1990 ಉಲ್ಲೇಖದ ಅವಧಿಗಿಂತ ಹೆಚ್ಚಾಗಿದೆ. ಇದಲ್ಲದೆ, ವಾಯುವ್ಯ ಪೆಸಿಫಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದ ಏಷ್ಯಾದ ಎರಡೂ ಭಾಗಗಳು ಜಾಗತಿಕ ದರಕ್ಕೆ ಹೋಲಿಸಬಹುದಾದ ಸರಾಸರಿ ದರದಲ್ಲಿ ಬೆಚ್ಚಗಾಗುತ್ತಿವೆ, ಇದು 0.64 W/m2 ಎಂದು ಅಂದಾಜಿಸಲಾಗಿದೆ.

ತುರ್ತು ಘಟನೆಗಳ ಅಂಕಿಅಂಶ (EM-DAT) ಪ್ರಕಾರ, 2022 ರಲ್ಲಿ, ಏಷ್ಯಾದಲ್ಲಿ 81 ನೈಸರ್ಗಿಕ ಅಪಾಯದ ಘಟನೆಗಳು ವರದಿಯಾಗಿವೆ; ಇವುಗಳಲ್ಲಿ, ಶೇಕಡಾ 83ಕ್ಕಿಂತ ಹೆಚ್ಚು ಪ್ರವಾಹ ಮತ್ತು ಚಂಡಮಾರುತದ ಘಟನೆಗಳಾಗಿವೆ. ಈ ಘಟನೆಗಳು 5,000 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಯಿತು, ಅದರಲ್ಲಿ ಶೇಕಡಾ 90ರಷ್ಟು ಪ್ರವಾಹಕ್ಕೆ ಸಂಬಂಧಿಸಿದೆ. ಒಟ್ಟಾರೆಯಾಗಿ, ನೈಸರ್ಗಿಕ ಅಪಾಯದ ಘಟನೆಗಳು 50 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ನೇರವಾಗಿ ಪರಿಣಾಮ ಬೀರಿ 36 ಶತಕೋಟಿ ಡಾಲರ್ ನಷ್ಟು ಹಾನಿಗೆ ಕಾರಣವಾಯಿತು.

2022ರ ಪ್ರಮುಖ ನೈಸರ್ಗಿಕ ವಿಕೋಪಗಳು ಭಾರತ ಮತ್ತು ಪಾಕಿಸ್ತಾನದಲ್ಲಿನ ಪ್ರವಾಹದಿಂದ ಚೀನಾದಲ್ಲಿ ಬರಗಾಲದಿಂದ ಭಾರತ, ಜಪಾನ್ ಮತ್ತು ಪಾಕಿಸ್ತಾನದ ಶಾಖದ ಅಲೆಗಳವರೆಗೆ ಏಷ್ಯಾದ ಅಭಿವೃದ್ಧಿಯ ವ್ಯಾಪ್ತಿಯಾದ್ಯಂತ ಪ್ರಭಾವ ಬೀರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

ಛಲ ಬಿಡದ ಪ್ರಯತ್ನಕ್ಕೆ ಫಲ: 216 ಗಂಟೆ ಭರತನಾಟ್ಯ ಪ್ರದರ್ಶನ ನೀಡಿ ವಿಶ್ವ ದಾಖಲೆ ಬರೆದ ಉಡುಪಿಯ ದೀಕ್ಷಾ!

SCROLL FOR NEXT