ಮಹಿಳೆಯರ ಜೊತೆ ಸೋನಿಯಾ ಗಾಂಧಿ ಸಂವಾದ 
ದೇಶ

ರಾಹುಲ್ ಗಾಂಧಿ ಮದುವೆ ಯಾವಾಗ? ಪ್ರಶ್ನೆ ಕೇಳಿದ ಹರ್ಯಾಣ ಮಹಿಳೆಗೆ ಸೋನಿಯಾ ಗಾಂಧಿ ಹೇಳಿದ್ದೇನು?

ಹರಿಯಾಣದ ಸೋನಿಪತ್‌ನ ರೈತ ಮಹಿಳೆಯರೊಂದಿಗೆ ಸೋನಿಯಾಗಾಂಧಿ ಸಂವಾದದಲ್ಲಿ ತೊಡಗಿದ್ದರು, ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂಧಿ ಮದುವೆ ಯಾವಾಗ ಎಂದು ಕೇಳಿದ್ದಾರೆ.

ನವದೆಹಲಿ: ರಾಹುಲ್ ಗಾಂಧಿ ಮದುವೆ ಯಾವಾಗ ಎಂದು ರೈತ ಮಹಿಳೆಯರು ಕೇಳಿದ ಪ್ರಶ್ನೆಗೆ ಸೋನಿಯಾ ಗಾಂಧಿ ಉತ್ತರಿಸಿದ್ದಾರೆ.

ಹರಿಯಾಣದ ಸೋನಿಪತ್‌ನ ರೈತ ಮಹಿಳೆಯರೊಂದಿಗೆ ಸೋನಿಯಾಗಾಂಧಿ ಸಂವಾದದಲ್ಲಿ ತೊಡಗಿದ್ದರು, ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂಧಿ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸೋನಿಯಾಗಾಂಧಿ ನೀವೇ ಹುಡುಗಿಯನ್ನು ಹುಡುಕಿ ಎಂದು ಹೇಳಿದರು.  ಈ ವೇಳೆ ಮಾತನಾಡಿದ ರಾಹುಲ್ ಅದು ಆಗುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಮಹಿಳೆಯರ  ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ , ತಮ್ಮ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರೈತ ಮಹಿಳೆಯರನ್ನ ಪ್ರಿಯಾಂಕಾ ಗಾಂಧಿ ಮನೆಗೆ ಆಹ್ವಾನಿಸಿ, ಸೋನಿಯಾ ಗಾಂಧಿ ಜೊತೆಗೆ ಭೋಜನಕ್ಕೆ ವ್ಯವಸ್ಥೆ ಮಾಡಿದ್ದರು.

ಹೀಗೆ ಮನೆಗೆ ಬಂದ ರೈತ ಮಹಿಳೆಯರ ಪೈಕಿ ಓರ್ವ ಮಹಿಳೆ ರಾಹುಲ್ ಗಾಂಧಿ ಅವರ ಮದುವೆ ಯಾವಾಗ? ಮಾಡಲಿದ್ದೀರಿ ಎಂದು ಸೋನಿಯಾ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿದ ಸೋನಿಯಾ ಗಾಂಧಿ ʻನೀವೆ ಹುಡುಗಿಯನ್ನ ಹುಡುಕಿ..ʼ ಎಂದು ಚಟಾಕಿ ಹಾರಿಸಿದ್ದಾರೆ. ರಾಹುಲ್ ಗಾಂಧಿ ಹಂಚಿಕೊಂಡಿರುವ ಈ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಔತಣ ಕೂಟದ ವೇಳೆ ಮಹಿಳೆಯರ ಜೊತೆಗೆ ಆಹಾರ, ಮಹಿಳಾ ಸಬಲೀಕರಣ ಮತ್ತು GST ಬಗ್ಗೆ ಚರ್ಚೆ ನಡೆಸಿದರು‌. ಈ ವೇಳೆ ಸರ್ಕಾರ ನನ್ನ ಮನೆಯನ್ನು ಕಿತ್ತುಕೊಂಡ ಹಿನ್ನಲೆ ಪ್ರಿಯಾಂಕಾ ಗಾಂಧಿ ಅವರ ಮನೆಗೆ ಆಹ್ವಾನಿಸಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT