ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರದಲ್ಲಿ ಈ ವರ್ಷ ಜೂನ್‌ವರೆಗೆ ಶೂನ್ಯ ಒಳನುಸುಳುವಿಕೆ; ಇದರಿಂದ ಭಯೋತ್ಪಾದನೆಗೆ ಬ್ರೇಕ್: ತಜ್ಞರು

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಜೂನ್‌ವರೆಗೆ ಶೂನ್ಯ ಒಳನುಸುಳುವಿಕೆ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಬಹಿರಂಗಪಡಿಸಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಜೂನ್‌ವರೆಗೆ ಶೂನ್ಯ ಒಳನುಸುಳುವಿಕೆ ಎಂದು ಕೇಂದ್ರ ಗೃಹ ಸಚಿವಾಲಯ(ಎಂಎಚ್‌ಎ) ಬಹಿರಂಗಪಡಿಸಿದೆ. ಶೂನ್ಯ ಒಳನುಸುಳುವಿಕೆ ಖಚಿತಪಡಿಸಿಕೊಂಡರೆ ಕಣಿವೆಯಲ್ಲಿ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲದ ಭಯೋತ್ಪಾದನೆಗೆ ಬ್ರೇಕ್ ಹಾಕಲು ಸಾಧ್ಯ ಎಂದು ಭದ್ರತಾ ತಜ್ಞರು ಹೇಳಿದ್ದಾರೆ.

ಗಡಿಯಾಚೆಗಿನ ಉಗ್ರಗಾಮಿಗಳು ಕಾಶ್ಮೀರಕ್ಕೆ ನುಸುಳಿ, ಸಂಚುಗಳನ್ನು ರೂಪಿಸಿ ದಾಳಿ ನಡೆಸುವುದರಿಂದ ಭಯೋತ್ಪಾದನೆ ಹೆಚ್ಚುತ್ತಿದೆ. ಈ ವಿದೇಶಿ ಉಗ್ರಗಾಮಿಗಳು, ದಾಳಿ ನಡೆಸಿದ ನಂತರ ನಾಪತ್ತೆಯಾಗುತ್ತಾರೆ ಅಥವಾ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾಗುತ್ತಾರೆ, ಇಲ್ಲವೆ ಎಲ್‌ಒಸಿಯ ಇನ್ನೊಂದು ಬದಿಯಿಂದ ಹಿಂತಿರುಗುತ್ತಾರೆ ಎಂದು ಕರ್ನಲ್(ನಿವೃತ್ತ) ಶಿವ ನಂದನ್ ಸಿಂಗ್ ಅವರು ತಿಳಿಸಿದ್ದಾರೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಪ್ರಕಾರ, ಈ ವರ್ಷ ಜೂನ್ 30 ರವರೆಗೆ ಶೂನ್ಯ ಉಗ್ರರ ಒಳನುಸುಳುವಿಕೆಗೆ ಕಾಶ್ಮೀರ ಸಾಕ್ಷಿಯಾಗಿದೆ. 2019 ರಲ್ಲಿ 141 ಒಳನುಸುಳುವಿ ಪ್ರಕರಣಗಳು ವರದಿಯಾಗಿದ್ದು, 2020 ರಲ್ಲಿ 51, 2021 ರಲ್ಲಿ 34 ಮತ್ತು 2022 ರಲ್ಲಿ ಕೇವಲ 14 ಘಟನೆಗಳು ವರದಿಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.

1990ರ ನಂತರ ಇದು ಮೊದಲ ಬಾರಿಗೆ ಉಗ್ರರ ಶೂನ್ಯ ನುಸುಳುವಿಕೆ ದಾಖಲಾಗಿದೆ. ಭದ್ರತಾ ಪಡೆಗಳು ಕಾಶ್ಮೀರದ ಒಳಗೆ ಉಗ್ರರು ಶೂನ್ಯ ನುಸುಳುವಿಕೆ ಖಚಿತಪಡಿಸಿಕೊಳ್ಳುವ ಹಂತ ತಲುಪಿದ್ದರೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಪೊಲೀಸ್ ಮುಖ್ಯಸ್ಥ ಎಸ್ಪಿ ವೈದ್ ಅವರು ಹೇಳಿದ್ದಾರೆ.

ಇದರರ್ಥ ನಾವು ಒಂದು ಮೈಲಿಗಲ್ಲು ಸಾಧಿಸಿದ್ದೇವೆ. ಈಗ ಈ ಶೂನ್ಯ ಒಳನುಸುಳುವಿಕೆಯನ್ನು ಮುಂಬರುವ ದಿನಗಳಲ್ಲೂ ಖಾತ್ರಿಪಡಿಸಿಕೊಳ್ಳಬೇಕು ಮತ್ತು ಗಡಿಯಲ್ಲಿ ಭದ್ರತೆಯನ್ನು ಕಡಿಮೆ ಮಾಡಬಾರದು. ಬದಲಾಗಿ ಕಟ್ಟೆಚ್ಚರ ಹೆಚ್ಚಿಸಬೇಕು'' ಎಂದು ವೈದ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT