ದೇಶ

ಗುಜರಾತ್‌ನಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಸಾರ್ವಜನಿಕವಾಗಿ ಥಳಿತ: ನಾಲ್ವರ ಬಂಧನ

Vishwanath S

ದಾಹೋದ್(ಗುಜರಾತ್‌): ಬುಡಕಟ್ಟು ಮಹಿಳೆಯೊಬ್ಬಳ ಮೇಲೆ ಆಕೆಯ ಪತಿ ಸೇರಿದಂತೆ ಕೆಲವರು ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಥಳಿಸಿದ್ದಾನೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆ ಮೇ 28ರಂದು ನಡೆದಿದೆ. ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಹೊರಬಿದ್ದ ನಂತರ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ತಕ್ಷಣ ಕ್ರಮ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಧಿಕೃತ ವರದಿಯ ಪ್ರಕಾರ, ಮಹಿಳೆ ಕಳೆದ 19 ತಿಂಗಳುಗಳಿಂದ ತನ್ನ ನಾಲ್ಕು ಮಕ್ಕಳು ಮತ್ತು ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪತ್ನಿಯ ಅಗಲಿಕೆಯಿಂದ ಪತಿ ತೊಂದರೆಗೀಡಾಗಿದ್ದನು. ಹೀಗಾಗಿ ಆತ ಇಬ್ಬರೊಂದಿಗೆ ಸೇರಿಕೊಂಡು ರಾಂಪುರ ಗ್ರಾಮದ ಮಹಿಳೆಯನ್ನು ಅಪಹರಿಸಿದ್ದಾನೆ.

ನಂತರ ಸಂತ್ರಸ್ತೆಯನ್ನು ಮರ್ಗ್ಲಾ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಗುಂಪು ಅವಳನ್ನು ಥಳಿಸಿದ್ದಾರೆ ಎಂದು ಸುಖಸರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ಮಹಿಳೆ ಮೆಹ್ಸಾನಾ ಜಿಲ್ಲೆಯ ಚನ್ಸ್ಮಾದಲ್ಲಿ ಇನ್ನೊಬ್ಬ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು ಎಂದು ಅಧಿಕಾರಿಗಳು ಬಹಿರಂಗಪಡಿಸಿದರು, ಅಲ್ಲಿ ಅವರಿಬ್ಬರೂ ದಿನಗೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದರು.

ಆ ವ್ಯಕ್ತಿಯ ತಾಯಿ ರಾಂಪುರ ಗ್ರಾಮದವರನ್ನು ಮದುವೆಗೆ ಆಹ್ವಾನಿಸಿದ್ದರು. ಅಲ್ಲದೆ ಮಹಿಳೆಯ ವಿಚ್ಛೇದಿತ ಪತಿಗೂ ಆಹ್ವಾನ ನೀಡಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದ ಪುರುಷರ ಗುಂಪು ವಿಚ್ಛೇದಿತ ಮಹಿಳೆ ಮತ್ತು ಆಕೆಯ ಸಹಚರನನ್ನು ಅಪಹರಿಸಿ ಮರ್ಗ್ಲಾ ಗ್ರಾಮಕ್ಕೆ ಕರೆದೊಯ್ದರು. ವಿಷಯ ಇನ್ನೂ ತನಿಖೆ ಹಂತದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT