ದೇಶ

ಪ್ರತಿಪಕ್ಷಗಳ ಒಗ್ಗಟ್ಟು: ರಾಹುಲ್ ಗಾಂಧಿ ಹೇಳಿಕೆಗೆ ಸಂಜಯ್ ರಾವುತ್ ಬೆಂಬಲ; 2024ರಲ್ಲಿ ಬಿಜೆಪಿ ಸೋಲಿಸುತ್ತೇವೆ ಎಂದ ನಾಯಕ

Ramyashree GN

ಮುಂಬೈ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಸ್ಪರ್ಧಿ ರಾಜಕೀಯ ಶಕ್ತಿಗಳನ್ನು ಹುರಿದುಂಬಿಸುವ ಪ್ರಯತ್ನಗಳ ನಡುವೆ ಸಂಸದ ಸಂಜಯ್ ರಾವತ್ ಶುಕ್ರವಾರ ರಾಹುಲ್ ಗಾಂಧಿಯವರ ವಿರೋಧ ಪಕ್ಷದ ಒಗ್ಗಟ್ಟಿನ ಹೇಳಿಕೆಯನ್ನು ಬೆಂಬಲಿಸಿದರು ಮತ್ತು 2024 ರಲ್ಲಿ ನಾವು ಪ್ರಸ್ತುತ ಸರ್ಕಾರ (ಬಿಜೆಪಿ) ಅನ್ನು ಸೋಲಿಸುತ್ತೇವೆ ಎಂದು ಹೇಳಿದರು. 

ರಾಹುಲ್ ಗಾಂಧಿ ಹೇಳಿದ್ದನ್ನು ನಾನು ಒಪ್ಪುತ್ತೇನೆ. ಇಡೀ ಪ್ರತಿಪಕ್ಷಗಳು ಒಗ್ಗೂಡಿವೆ ಮತ್ತು 2024 ರಲ್ಲಿ ನಾವು ಕೇಂದ್ರದಲ್ಲಿ ಪ್ರಸ್ತುತ (ಬಿಜೆಪಿ) ಸರ್ಕಾರವನ್ನು ಸೋಲಿಸುತ್ತೇವೆ. ಇದು ನಮ್ಮ ನಂಬಿಕೆ ಮತ್ತು ಆತ್ಮಸ್ಥೈರ್ಯ. ನಾವು ಪರಸ್ಪರರ ಕೈ ಹಿಡಿದು ಮುನ್ನಡೆಯುತ್ತೇವೆ ಎಂದು ರಾವುತ್ ಹೇಳಿದರು.

ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಹಲವಾರು ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಮುಂದಿಟ್ಟ ರಾಹುಲ್, ತಮ್ಮ ಪಕ್ಷವು ವಿರೋಧ ಪಕ್ಷಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದರು.

ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಎಎನ್‌ಐ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್, ತಮ್ಮ ಪಕ್ಷವು ಎಲ್ಲಾ ವಿರೋಧ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸುತ್ತಿದೆ. ಆ ನಿಟ್ಟಿನಲ್ಲಿ "ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ" ಎಂದು ಹೇಳಿದರು.

ಪ್ರತಿಪಕ್ಷಗಳು ಒಗ್ಗಟ್ಟಾಗಿವೆ ಮತ್ತು ಹೆಚ್ಚು ಹೆಚ್ಚು ಒಗ್ಗೂಡುತ್ತಿದೆ. ನಾವು ಎಲ್ಲಾ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ ಎಂದು ನಾನು ಭಾವಿಸುತ್ತೇನೆ. ನಾವು ಪ್ರತಿಪಕ್ಷಗಳೊಂದಿಗೆ ಸ್ಪರ್ಧಿಸುವ ಸ್ಥಳಗಳಿರುವುದರಿಂದ ಇದು ಸಂಕೀರ್ಣವಾದ ಚರ್ಚೆಯಾಗಿದೆ. ಹಾಗಾಗಿ ಸ್ವಲ್ಪ ಕೊಡು ಕೊಳ್ಳುವ ಅಗತ್ಯವಿದೆ. ಆದರೆ, ಅದು (ಕೇಂದ್ರದಲ್ಲಿ ಬಿಜೆಪಿ ವಿರುದ್ಧದ ಮಹಾ ವಿರೋಧ ಪಕ್ಷದ ಮೈತ್ರಿ) ಸಂಭವಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ರಾಹುಲ್ ಹೇಳಿದರು. 

SCROLL FOR NEXT