ದೇಶ

ಒಡಿಶಾ ರೈಲು ದುರಂತ: ಗಾಯಗೊಂಡ ಪ್ರಯಾಣಿಕರ ಚಿಕಿತ್ಸೆಯ ವ್ಯವಸ್ಥೆಯನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವರು!

Vishwanath S

ಭುವನೇಶ್ವರ: ಬಾಲಸೋರ್ ಜಿಲ್ಲೆಯ ಬಹನಾಗಾದಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತದಲ್ಲಿ ಬದುಕುಳಿದವರ ನಿರ್ಣಾಯಕ ಆರೋಗ್ಯ ಅಗತ್ಯಗಳನ್ನು ಪೂರೈಸಲು, ಕೇಂದ್ರವು ನವದೆಹಲಿಯಿಂದ ಭುವನೇಶ್ವರ ಮತ್ತು ಕಟಕ್‌ಗೆ ವೈದ್ಯರು ಮತ್ತು ನಿರ್ಣಾಯಕ ವೈದ್ಯಕೀಯ ಸಾಧನಗಳನ್ನು ಸಜ್ಜುಗೊಳಿಸಿದೆ.

ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ದುರದೃಷ್ಟಕರ ರೈಲುಗಳಾದ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು-ಹೌರಾ ಯಶವಂತಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನ ಗಾಯಗೊಂಡ ಪ್ರಯಾಣಿಕರ ಯೋಗಕ್ಷೇಮ ನೋಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜವಾಬ್ದಾರಿ ವಹಿಸಿದ್ದಾರೆ.

'ಈ ಭೀಕರ ಅಪಘಾತದಲ್ಲಿ 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 100ಕ್ಕೂ ಹೆಚ್ಚು ಮಂದಿಯ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅವರಿಗೆ ತಕ್ಷಣದ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಹೀಗಾಗಿ ಆಧುನಿಕ ಉಪಕರಣಗಳೊಂದಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯ ಲೇಡಿ ಹಾರ್ಡಿಂಜ್, ಆಸ್ಪತ್ರೆಯಿಂದ ತಜ್ಞ ವೈದ್ಯರು ವಿಶೇಷ ವಾಯುಪಡೆಯ ವಿಮಾನದಲ್ಲಿ ಇಲ್ಲಿಗೆ ತಲುಪಿದ್ದಾರೆ. ಇನ್ನು ನಾವು ವಿವರವಾದ ಚರ್ಚೆ ನಡೆಸಿದ್ದು ಕ್ರಿಯಾ ಯೋಜನೆಯನ್ನು ಸಹ ಸಿದ್ಧಪಡಿಸಿದ್ದೇವೆ ಎಂದು ಮಾಂಡವಿಯಾ ಹೇಳಿದರು. 

ಗಂಭೀರವಾಗಿ ಗಾಯಗೊಂಡಿರುವ ರೋಗಿಗಳನ್ನು ಬಾಲಸೋರ್, ಭದ್ರಕ್, ಕಟಕ್ ಮತ್ತು ಭುವನೇಶ್ವರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಅಲ್ಲಿ ವಿಶೇಷ ಚಿಕಿತ್ಸೆ ಒದಗಿಸಲು ವೈದ್ಯರ ತಜ್ಞ ತಂಡದ ಸದಸ್ಯರನ್ನು ವಿವಿಧ ಆಸ್ಪತ್ರೆಗಳಿಗೆ ಸಜ್ಜುಗೊಳಿಸಲು ಯೋಜಿಸಲಾಗಿದೆ. ಇದರಿಂದಾಗಿ ಅನೇಕ ರೋಗಿಗಳ ಜೀವಗಳನ್ನು ಉಳಿಸಬಹುದು ಅವರು ಹೇಳಿದರು.

ಏಮ್ಸ್‌ಗೆ ಭೇಟಿ ನೀಡಿದ ನಂತರ ಕೇಂದ್ರ ಆರೋಗ್ಯ ಸಚಿವರು, ಭುವನೇಶ್ವರ್ ರಾಜಧಾನಿ ಆಸ್ಪತ್ರೆಗೆ ತೆರಳಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಸಿಬ್ಬಂದಿ ಮತ್ತು ರೋಗಿಗಳೊಂದಿಗೆ ಸಂವಾದ ನಡೆಸಿದರು. ಅವರು ಕಟಕ್‌ನ ಎಸ್‌ಸಿಬಿ ಎಂಸಿಎಚ್‌ಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಶನಿವಾರ ಬಹನಾಗಾದಲ್ಲಿ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಮಾಂಡವಿಯಾ ಅವರೊಂದಿಗೆ ಮಾತನಾಡಿದರು. ಬದುಕುಳಿಯಲು ಹೆಣಗಾಡುತ್ತಿರುವ ರೋಗಿಗಳ ಚಿಕಿತ್ಸೆಯನ್ನು ಹೆಚ್ಚಿಸಲು ಪ್ರಮುಖ ಉಪಕರಣಗಳು ಮತ್ತು ಔಷಧಿಗಳೊಂದಿಗೆ ವೈದ್ಯರ ತಂಡವನ್ನು ಕಳುಹಿಸಲು ಕೇಳಿದರು ಎಂದು ವರದಿಯಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಗಾಯಾಳುಗಳ ಜೀವ ಉಳಿಸಲು ಅವರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವುದಾಗಿ ಪ್ರಧಾನಿ ಭರವಸೆ ನೀಡಿದರು.

SCROLL FOR NEXT