ವಿಮಾನ ಪ್ರಯಾಣ 
ದೇಶ

ಪ್ರಯಾಣಿಕರಲ್ಲಿ ಹೆಚ್ಚುತ್ತಿದೆ ಅಶಿಸ್ತಿನ ವರ್ತನೆ: ಐಎಟಿಎ

ವಿಮಾನ ಪ್ರಯಾಣಿಕರಲ್ಲಿ ಅಶಿಸ್ತಿನ ವರ್ತನೆ ಹೆಚ್ಚುತ್ತಿದೆ ಎಂದು ಅಂತರಾಷ್ಟ್ರೀಯ ವಿಮಾನಯಾನ ಸಮೂಹ ಐಎಟಿಎ ಹೇಳಿದೆ. 

ನವದೆಹಲಿ: ವಿಮಾನ ಪ್ರಯಾಣಿಕರಲ್ಲಿ ಅಶಿಸ್ತಿನ ವರ್ತನೆ ಹೆಚ್ಚುತ್ತಿದೆ ಎಂದು ಅಂತರಾಷ್ಟ್ರೀಯ ವಿಮಾನಯಾನ ಸಮೂಹ ಐಎಟಿಎ ಹೇಳಿದೆ. 

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಪ್ರತಿ 568 ವಿಮಾನಗಳ ಪೈಕಿ ಒಂದರಲ್ಲಿ ಅಶಿಸ್ತಿನ ಘಟನೆ ವರದಿಯಾಗುತ್ತಿದೆ. 2021 ರಲ್ಲಿ ಇದರ ಅನುಪಾತ ಪ್ರತಿ 835 ವಿಮಾನಗಳ ಪೈಕಿ ಒಂದರಲ್ಲಿ ವರದಿಯಾಗುತ್ತಿತ್ತು ಎಂದು ಐಎಟಿಎ ಮಾಹಿತಿ ನೀಡಿದೆ. 

ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ ಎನ್ನುತ್ತಿದೆ ಐಎಟಿಎ ಬಿಡುಗಡೆ ಮಾಡಿರುವ ವಿಶ್ಲೇಷಣೆಯ ವರದಿ. 

ಇಂತಹ ಅಶಿಸ್ತಿನ ನಡವಳಿಕೆಗಳ ಪ್ರಕರಣಗಳನ್ನು ಕಡಿಮೆ ಮಾಡುವುದಕ್ಕೆ, ಮಾಂಟ್ರಿಯಲ್ ಪ್ರೋಟೋಕಾಲ್ 2014 (MP14) ಅಡಿಯಲ್ಲಿ ಪ್ರಯಾಣಿಕರನ್ನು ವಿಚಾರಣೆಗೆ ಒಳಪಡಿಸಲು ಹೆಚ್ಚಿನ ರಾಷ್ಟ್ರಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಂಟರ್ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಒತ್ತಾಯಿಸಿದೆ.

ಮೌಖಿಕ ನಿಂದನೆ ಮತ್ತು ಮಾದಕತೆ ಹಾಗೂ ನಿಯಮಗಳ ಉಲ್ಲಂಘನೆಗಳು 2022 ರಲ್ಲಿ ವರದಿಯಾದ ಅತಿ ಹೆಚ್ಚು ಅಶಿಸ್ತಿನ ಘಟನೆಗಳಾಗಿವೆ ಎಂದು ಐಎಟಿಎ ಮಾಹಿತಿ ನೀಡಿದೆ.

"ದೈಹಿಕ ಹಲ್ಲೆಯಂತಹ ಘಟನೆಗಳು ಬಹಳ ಅಪರೂಪವಾಗಿ ವರದಿಯಾಗಿದ್ದು, ಆದರೆ ಇಂತಹ ಪ್ರಕರಣಗಳೂ 2021 ಕ್ಕೆ ಹೋಲಿಕೆ ಮಾಡಿದರೆ, 61 ಪ್ರತಿಶತದಷ್ಟು ಹೆಚ್ಚಳವನ್ನು ಕಂಡಿವೆ, ಇದು ಪ್ರತಿ 17,200 ವಿಮಾನಗಳ ಪೈಕಿ ಒಂದು ವಿಮಾನದಲ್ಲಿ ಸಂಭವಿಸಿದೆ" ಎಂದು IATA ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT