ದೇಶ

ಮಣಿಪುರದಲ್ಲಿ ಹಿಂಸಾಚಾರ: ಅಮಿತ್ ಶಾ ನಿವಾಸದ ಎದುರು ಕುಕಿ ಬುಡಕಟ್ಟು ಮಹಿಳೆಯರಿಂದ ಪ್ರತಿಭಟನೆ

Manjula VN

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಡೆಯುವಂತೆ ಕುಕಿ ಬುಡಕಟ್ಟಿನ ಮಹಿಳೆಯರು ಮನವಿಯ ಫಲಕಗಳನ್ನು ಹಿಡಿದು ನವದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.

"ಶಾಂತಿ ಮರುಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ ಹೊರತಾಗಿಯೂ, ಮಣಿಪುರದಲ್ಲಿ ನಮ್ಮ ಸಮುದಾಯದ ಮೇಲೆ ದಾಳಿಗಳು ಮುಂದುವರಿದಿವೆ. ಇಲ್ಲಿ ಜೀವಗಳು ಅಪಾಯದಲ್ಲಿವೆ. ಗೃಹ ಸಚಿವರು ಹಾಗೂ ಪ್ರಧಾನಿ ಮೋದಿ ಮಾತ್ರ ನಮಗೆ ಸಹಾಯ ಮಾಡಬಹುದು" ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಹಲವರ ಪೈಕಿ ನಾಲ್ವರನ್ನು ಸಚಿವರ ಭೇಟಿಗೆ ಅವಕಾಶ ನೀಡಲಾಯಿತು. ಉಳಿದರವನ್ನು ಜಂಟರ್ ಮಂತರ್'ಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಮ್ಯಾನ್ಮಾರ್‌ನ ಗಡಿಯಲ್ಲಿರುವ ಈಶಾನ್ಯ ರಾಜ್ಯವು ಕಳೆದ ಕೆಲವು ವಾರಗಳಲ್ಲಿ ಉದ್ವಿಗ್ನವಾಗಿದೆ, ಗಲಭೆಗಳು ಮತ್ತು ಜನಾಂಗೀಯ ಘರ್ಷಣೆಗಳು ಮೇ ಆರಂಭದಿಂದ ಇಲ್ಲಿಯವರೆಗೆ ಕನಿಷ್ಠ 98 ಜನರು ಸಾವಿಗೀಡಾಗಿದ್ದು, 310 ಮಂದಿ ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ 37,450 ಮಂದಿ 272 ಶಿಬಿರಗಳಲ್ಲಿ ಆಶ್ರ ಪಡೆದುಕೊಂಡಿದ್ದಾರೆ.

SCROLL FOR NEXT