ದೇಶ

ಮುಂದಿನ ವಾರ ನೀಟ್-ಯುಜಿ ಫಲಿತಾಂಶ ಪ್ರಕಟ: ಯುಜಿಸಿ ಅಧ್ಯಕ್ಷ

Lingaraj Badiger

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಮುಂದಿನ ವಾರ ನೀಟ್-ಯುಜಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ(ಯುಜಿಸಿ) ಅಧ್ಯಕ್ಷ ಪ್ರೊ.ಎಂ.ಜಗದೇಶ್ ಕುಮಾರ್ ಅವರು ಬುಧವಾರ ಹೇಳಿದ್ದಾರೆ.

NEET-UG ಪರೀಕ್ಷೆಯ ಫಲಿತಾಂಶವನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಕುರಿತ ಸಂಸದೀಯ ಸಮಿತಿಗೆ NTA ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಎನ್‌ಟಿಎ ಮುಂದಿನ ವಾರದ ವೇಳೆಗೆ ಫಲಿತಾಂಶ ಪ್ರಕಟಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರ್, ಮುಂದಿನ ವಾರ ಫಲಿತಾಂಶ ಪ್ರಕಟವಾಗಲಿದೆ. ಎನ್‌ಟಿಎ ಅದರ ಮೇಲೆ ಕೆಲಸ ಮಾಡುತ್ತಿದೆ ಎಂದರು.

ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(NEET) UG 2023 ಅನ್ನು ಮೇ 7 ರಂದು ನಡೆಸಲಾಯಿತು. ಆದಾಗ್ಯೂ, ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ದೆಹಲಿ ಸೇರಿದಂತೆ 10 ನಗರಗಲ್ಲಿ ಪರೀಕ್ಷೆ ಬರೆಯಲು ಎನ್‌ಟಿಎ ಆಕಾಂಕ್ಷಿಗಳಿಗೆ ಅವಕಾಶ ನೀಡಲಾಗಿತ್ತು.

ಮಣಿಪುರದಲ್ಲಿ ಜೂನ್ 6 ರಂದು ನೀಟ್-ಯುಜಿ ಪರೀಕ್ಷೆ ನಡೆಸಲಾಯಿತು. ಮಣಿಪುರದಿಂದ 8,000 ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT