ದೇಶ

ಮುಂದಿನ 36 ಗಂಟೆಗಳಲ್ಲಿ ಬೈಪಾರ್ಜಾಯ್ ಚಂಡಮಾರುತ ತೀವ್ರ: ಉತ್ತರ-ವಾಯುವ್ಯ ದಿಕ್ಕಿನತ್ತ ಚಲನೆ

Srinivasamurthy VN

ನವದೆಹಲಿ: ಮುಂದಿನ 36 ಗಂಟೆಗಳಲ್ಲಿ ಬೈಪಾರ್ಜಾಯ್ ಚಂಡಮಾರುತ ತೀವ್ರಗೊಳ್ಳಲ್ಲಿದ್ದು, ಮುಂಬೈ, ಗೋವಾ, ಕರ್ನಾಟಕದ ಕರಾವಳಿಯಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಮಾನ ಇಲಾಖೆ ಹೇಳಿದೆ.

ಮುಂದಿನ 36 ಗಂಟೆಗಳಲ್ಲಿ ಬಿಪಾರ್ಜಾಯ್ ಚಂಡಮಾರುತ ತೀವ್ರಗೊಳ್ಳಲಿದ್ದು, ಮುಂದಿನ ಎರಡು ದಿನಗಳಲ್ಲಿ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಚಲಿಸಲಿದೆ. ಅತ್ಯಂತ ತೀವ್ರವಾದ ಚಂಡಮಾರುತವು ಜೂನ್ 8 ರಂದು ರಾತ್ರಿ 11:30 ಗಂಟೆಗೆ ಗೋವಾದ ಪಶ್ಚಿಮ-ನೈಋತ್ಯಕ್ಕೆ 840 ಕಿಲೋಮೀಟರ್ ಮತ್ತು ಮುಂಬೈನಿಂದ 870 ಕಿಮೀ ಪಶ್ಚಿಮ-ನೈಋತ್ಯದಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಟ್ವೀಟ್‌ನಲ್ಲಿ ತಿಳಿಸಿದೆ.

2023 ರ ಜೂನ್ 08 ರ 11.30ರ ವೇಳೆಗೆ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಅತ್ಯಂತ ತೀವ್ರವಾದ ಬಿಪರ್ಜೋಯ್ ಚಂಡಮಾರುತವು ಗೋವಾದ ಪಶ್ಚಿಮ-ನೈಋತ್ಯಕ್ಕೆ ಸುಮಾರು 840 ಕಿಮೀ, ಮುಂಬೈನಿಂದ 870 ಕಿಮೀ ಪಶ್ಚಿಮ-ನೈಋತ್ಯದಲ್ಲಿ ನೆಲೆಗೊಂಡಿದೆ. ಮುಂದಿನ 36 ಗಂಟೆಗಳಲ್ಲಿ ಮತ್ತಷ್ಟು ಕ್ರಮೇಣವಾಗಿ ತೀವ್ರಗೊಳ್ಳುತ್ತದೆ ಮತ್ತು 2 ದಿನಗಳಲ್ಲಿ ಉತ್ತರ-ವಾಯುವ್ಯಕ್ಕೆ ಅಪ್ಪಳಿಸಲಿದೆ ಎಂದು ಐಎಂಡಿ ಟ್ವೀಟ್ ಮೂಲಕ ಮಾಹಿತಿ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಇಂತಹ ಚಂಡಮಾರುತ ಪೀಡಿತ ಪ್ರದೇಶಗಳಿಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ. ಸಮುದ್ರದಲ್ಲಿ ಇದ್ದವರು ಕರಾವಳಿಗೆ ಮರಳಲು ಸೂಚಿಸಲಾಗಿದೆ ಎಂದು ಅದು ಮೊದಲೇ ಹೇಳಿತ್ತು. 
 

SCROLL FOR NEXT