ದೇಶ

ಚಂಡಿ ದೇವಾಲಯದಲ್ಲಿ ನಮಾಜ್ ಮಾಡಿದ ಆರೋಪ: ವ್ಯಕ್ತಿಯ ಬಂಧನ 

Srinivas Rao BV

ಲಖನೌ: ಚಂಡಿ ದೇವಾಲಯದಲ್ಲಿ ನಮಾಜ್ ಮಾಡಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಹಾಪುರದಲ್ಲಿ ವರದಿಯಾಗಿದೆ.

ದೇವಾಲಯ ಸಮಿತಿಯ ಪದಾಧಿಕಾರಿಯಾಗಿರುವ ಸತ್ಯನಾರಾಯಣ್ ಅಗರ್ವಾಲ್, ಕೊತ್ವಾಲಿ ನಗರದ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವ ದೇವಾಲಯದಲ್ಲಿ ನಮಾಜ್ ಮಾಡಿದ ಬಗ್ಗೆ ದೂರು ನೀಡಿದ್ದರು. ನಮಾಜ್ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. 

ಹಾಪುರದ ಎಸ್ ಪಿ ಅಭಿಷೇಕ್ ವರ್ಮಾ ಈ ಬಗ್ಗೆ ಮಾತನಾಡಿ ಸರಾಯ್ ಬಸ್ರತ್ ಅಲಿಯ ನಿವಾಸಿಯಾಗಿರುವ ಅನ್ವರ್, ಶುಕ್ರವಾರ ಬೆಳಿಗ್ಗೆ ದೆವಾಲಯದಲ್ಲಿ ನಮಾಜ್ ಮಾಡಿದ್ದ ಆರೋಪ ಕೇಳಿಬಂದಿದೆ. ಆತನನ್ನು ಬುಲಂದ್ ಶಹರ್ ರಸ್ತೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
 
ದೂರುದಾರನನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳು ಆರೋಪಿಯ ಗುರುತು ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮರಾ ಫುಟೇಜ್ ನ್ನು ಪರಿಶೀಲಿಸಿದ್ದಾರೆ. ಹಾಪುರ  ಸದಾರ್ ಶಾಸಕ ವಿಜಯ್ ಪಾಲ್ ಅಧಾತಿ ನಗರದಲ್ಲಿರುವ ದೇವಾಲಯಗಳಿಗೆ ಭದ್ರತೆಯನ್ನು ಬಿಗಿಗೊಳಿಸಲು ಒತ್ತಾಯಿಸಿದ್ದಾರೆ. 

SCROLL FOR NEXT