ದೇಶ

2024ರ ಚುನಾವಣೆ: 10 ಕೇಂದ್ರ ಸಚಿವರು ಸೇರಿದಂತೆ 18 ಬಿಜೆಪಿ ರಾಜ್ಯಸಭಾ ಸಂಸದರ ಸ್ಪರ್ಧೆ?

Shilpa D

ನವದೆಹಲಿ: 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ 10 ಕೇಂದ್ರ ಸಚಿವರು ಮತ್ತು ಕೆಲವು ಶಾಸಕರು ಸೇರಿದಂತೆ 18 ರಾಜ್ಯಸಭಾ ಸದಸ್ಯರು ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ನರೇಂದ್ರ ಮೋದಿ ಸಂಪುಟದಲ್ಲಿನ ಸಚಿವರು ಮತ್ತು  ರಾಜ್ಯಸಭಾ ಸಂಸದರು ಐದು ಲೋಕಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಕೇಳಿಕೊಂಡಿದ್ದಾರೆ ಎನ್ನಲಾಗಿದೆ, ಕೆಲವು ಕ್ಯಾಬಿನೆಟ್ ಸಚಿವರು ಮತ್ತು ಕೆಲವು ಸಂಸದರ ಹೆಸರುಗಳು ಮಾಧ್ಯಮಗಳು ಮತ್ತು ರಾಜಕೀಯ ವಲಯಗಳಲ್ಲಿ ಸುತ್ತುತ್ತಿವೆ.

ಲೋಕಸಭೆ ಚುನಾವಣೆಗೆ ರಾಜ್ಯಸಭಾ ಸಂಸದರಾಗಿರುವ ಕೆಲವು ಕೇಂದ್ರ ಸಚಿವರನ್ನು ಕಣಕ್ಕಿಳಿಸಲು ಪಕ್ಷವು ಇತ್ತೀಚೆಗೆ ವ್ಯಾಪಕ ಚರ್ಚೆಗಳನ್ನು ನಡೆಸಿದೆ ಎಂದು ತಿಳಿಸಲಾಗಿದೆ. ಅವರ ಆಯ್ಕೆಯು ಅವರ ಕಾರ್ಯಕ್ಷಮತೆ ಮತ್ತು 2024 ರ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ಅವರ ಸಾಮರ್ಥ್ಯವನ್ನು ಆಧರಿಸಿದೆ. ಮುಂದಿನ ಲೋಕಸಭೆಯಲ್ಲಿ ಸ್ಪರ್ಧಿಸಲು ಸಿದ್ಧರಾಗುವಂತೆ ಪಕ್ಷವು ಇತ್ತೀಚಿನ ಸಭೆಯಲ್ಲಿ ಮೌಖಿಕ ಸೂಚನೆ ನೀಡಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಚಿವರಾದ ಪಿಯೂಷ್ ಗೋಯಲ್, ಭೂಪೇಂದ್ರ ಯಾದವ್, ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವಿಯಾ, ಹರ್ದೀಪ್ ಪುರಿ, ಎಸ್ ಜೈಶಂಕರ್, ಪುರುಷೋತ್ತಮ್ ರೂಪಾಲಾ ಮತ್ತಿತರರ ಹೆಸರುಗಳು ಕೇಳಿ ಬರುತ್ತಿವೆ. ಇವರೆಲ್ಲರೂ ರಾಜ್ಯಸಭೆಯಲ್ಲಿ ಎರಡನೇ ಅವಧಿಯನ್ನು ಪೂರ್ಣಗೊಳಿಸುತ್ತಿದ್ದಾರೆ.

ಜೈಶಂಕರ್ ಅವರು ನವದೆಹಲಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಒಡಿಶಾದಿಂದ ಸಂಬಲ್ಪುರ್ ಅಥವಾ ಧೆಂಕನಾಲ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಮಧುರೈನಿಂದ ನಿರ್ಮಲಾ ಸೀತಾರಾಮನ್ ಸ್ಪರ್ಧಿಸುವ ಸಾಧ್ಯತೆಯಿದೆ ಮತ್ತು ಮುಂದಿನ ವರ್ಷ ತಮ್ಮ ಎರಡನೇ ರಾಜ್ಯಸಭಾ ಅವಧಿಯನ್ನು ಪೂರ್ಣಗೊಳಿಸುತ್ತಿರುವ ಹರ್ದೀಪ್ ಪುರಿ ಅವರು ಅಮೃತಸರ ಅಥವಾ ಸಿಖ್ ಪ್ರಾಬಲ್ಯದ ಯಾವುದೇ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಬಹುದು ಎಂಬ ವದಂತಿಗಳಿವೆ.

ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರ ಹೆಸರು ಕೂಡ ಕೇಳಿಬರುತ್ತಿದೆ. ಅವರು ಲೋಕಸಭೆ ಚುನಾವಣೆಗೆ ಮಂಡಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಮತ್ತು ಮತ್ತೊಬ್ಬ ಕೇಂದ್ರ ಸಚಿವ ಮತ್ತು ಪ್ರಧಾನಿ ಮೋದಿಯವರ ಆಪ್ತ ಪಿಯೂಷ್ ಗೋಯಲ್ ಅವರು ಚಾಂದನಿ ಚೌಕ್ ಅಥವಾ ಪುಣೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಗುಜರಾತ್‌ನಿಂದ ಲೋಕಸಭೆಯ ಸ್ಥಾನವನ್ನು ಆಯ್ಕೆ ಮಾಡಲು ಕೇಳಲಾಗಿದೆ ಎಂದು ತಿಳಿದುಬಂದಿದೆ.

ಡಾ.ಕೆ.ಲಕ್ಷ್ಮಣ್ (ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ), ಸುಶೀಲ್ ಕುಮಾರ್ ಮೋದಿ (ಬಿಹಾರದ ಮಾಜಿ ಉಪ ಮುಖ್ಯಮಂತ್ರಿ) ಸೇರಿದಂತೆ ರಾಜ್ಯಸಭಾ ಸಂಸದರ ಹೆಸರು ಕೇಳಿಬರುತ್ತಿದೆ. ತೆಲಂಗಾಣದ ಚೆವೆಲ್ಲಾ ಕ್ಷೇತ್ರದಿಂದ ಡಾ.ಕೆ.ಲಕ್ಷ್ಮಣ್ ಸ್ಪರ್ಧಿಸುವ ಸಾಧ್ಯತೆಯಿದ್ದು, ಸುಶೀಲ್ ಕುಮಾರ್ ಮೋದಿ ಭಾಗಲ್ಪುರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಎಪಿ ಅಬ್ದುಲ್ಲಕುಟ್ಟಿ, ಮಾಜಿ ಎಂಪಿ, ಲಕ್ಷದ್ವೀಪದಿಂದ ಸ್ಪರ್ಧಿಸಲು ಕೇಳಬಹುದು ಆದರೆ ಹೊಸದಾಗಿ ಸೇರ್ಪಡೆಗೊಂಡ ಜೈವೀರ್ ಶೆರ್ಗಿಲ್ ಅವರ ಹೆಸರು ಆನಂದಪುರ ಸಾಹಿಬ್ ಲೂಧಿಯಾನ ಮತ್ತು ಸುನಿಲ್ ಜಖರ್ ಗುರುದಾಸ್ಪುರದಿಂದ ಸಂಭಾವ್ಯ ಅಭ್ಯರ್ಥಿಯಾಗಿ ಕೇಳಿ ಬರುತ್ತಿವೆ. ಒಡಿಶಾದ ಮಾಜಿ ಸಂಸದ ಬೈಜಯಂತ್ ಜಯ್ ಪಾಂಡಾ ಅವರ ಹೆಸರೂ ಚರ್ಚೆಯಲ್ಲಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರ ಹೆಸರು ಒಡಿಶಾದ ಪುರಿ ಮತ್ತು ಮೆಹಬೂಬ್‌ನಗರದಿಂದ ಬಿಜೆಪಿ ಕರ್ನಾಟಕದ ಸಹ ಉಸ್ತುವಾರಿ ಡಿ.ಕೆ.ಅರುಣಾ ಅವರ ಸಂಭಾವ್ಯ ಅಭ್ಯರ್ಥಿ ಎಂದು ಹೇಳಲಾಗಿದೆ.

ತೆಲಂಗಾಣದ ಗೋಶಾಮಹಲ್‌ನ ರಾಜಾ ಸಿಂಗ್, ಕೊಯಮತ್ತೂರಿನ ವನತಿ ಶ್ರೀನಿವಾಸನ್ (ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ) ಮತ್ತು ಇತರ ಹಲವು ಪಕ್ಷದ ಶಾಸಕರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

SCROLL FOR NEXT