ದೇಶ

ಜೂನ್ 26 ರಂದು ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ಐದು ಹೊಸ ವಂದೇ ಭಾರತ್ ರೈಲಿಗೆ ಚಾಲನೆ

Lingaraj Badiger

ನವದೆಹಲಿ: ಜೂನ್ 2 ರಂದು ಒಡಿಶಾದಲ್ಲಿ 289 ಜನರನ್ನು ಬಲಿ ಪಡೆದ ತ್ರಿವಳಿ ರೈಲು ಅಪಘಾತದ ನಂತರ ಭಾರತೀಯ ರೈಲ್ವೆ ಜೂನ್ 26 ರಿಂದ ಐದು ಮಾರ್ಗಗಳಲ್ಲಿ ಐದು ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಐದು ಸೆಮಿ ಹೈಸ್ಪೀಡ್ ರೈಲುಗಳಿಗೆ ಚಾಲನೆ ನೀಡುವ ನಿರೀಕ್ಷೆ ಇದೆ.

ಐದು ವಂದೇ ಭಾರತ್ ರೈಲುಗಳು ಚಲಿಸುವ ಮಾರ್ಗಗಳೆಂದರೆ - ಮುಂಬೈ-ಗೋವಾ, ಬೆಂಗಳೂರು-ಹುಬ್ಬಳ್ಳಿ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್ ಮತ್ತು ಭೋಪಾಲ್-ಜಬಲ್ಪುರ.

ಒಡಿಶಾ ದುರಂತದ ನಂತರ ರೈಲ್ವೆ ಸಚಿವಾಲಯವು ಮುಂಬೈ-ಗೋವಾ ವಂದೇ ಭಾರತ್ ರೈಲಿನ ಉದ್ಘಾಟನೆಯನ್ನು ರದ್ದುಗೊಳಿಸಿತ್ತು. ಒಂದೇ ದಿನದಲ್ಲಿ ಐದು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡುತ್ತಿರುವುದು ಇದೇ ಮೊದಲು.

SCROLL FOR NEXT