ಸಾಂದರ್ಭಿಕ ಚಿತ್ರ 
ದೇಶ

ಉತ್ತರ ಪ್ರದೇಶ: ಪತ್ನಿಯನ್ನು ತಬ್ಬಿಕೊಂಡು ಗುಂಡು ಹಾರಿಸಿದ ಪತಿ, ಅದೇ ಬುಲೆಟ್ ಆತನ ಎದೆ ಸೀಳಿದೆ!

ಮೊರಾದಾಬಾದ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಂದೇ ಗುಂಡಿಗೆ ಇಬ್ಬರು ಸಾವನ್ನಪ್ಪಿದ್ದಾರೆ.

ಮೊರಾದಾಬಾದ್(ಉತ್ತರ ಪ್ರದೇಶ): ಮೊರಾದಾಬಾದ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಂದೇ ಗುಂಡಿಗೆ ಇಬ್ಬರು ಸಾವನ್ನಪ್ಪಿದ್ದಾರೆ. ವಾಸ್ತವವಾಗಿ, ಪತಿಯೋರ್ವ ಮೊದಲು ತನ್ನ ಹೆಂಡತಿಯನ್ನು ತಬ್ಬಿಕೊಂಡ ನಂತರ ಅವಳ ಬೆನ್ನಿಗೆ ಗುಂಡು ಹಾರಿಸಿದ್ದನು. ಆದರೆ ಅದೇ ಬುಲೆಟ್ ಆತನ ಎದೆಯನ್ನು ಸೀಳಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, 40 ವರ್ಷದ ಅನೇಕ್ ಪಾಲ್ ಮತ್ತು ಆತನ ಪತ್ನಿ 38 ವರ್ಷದ ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. ಒಬ್ಬ ಮಗಳು ಮತ್ತು ಮೂವರು ಗಂಡು ಮಕ್ಕಳು. ಇಬ್ಬರೂ ಚಂಡೀಗಢದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮೊರಾದಾಬಾದ್‌ಗೆ ಬಂದಿದ್ದರು. ಜೂನ್ 13 ಮತ್ತು 14ರ ಮಧ್ಯರಾತ್ರಿ ಬಿಲಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಖಾನ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಮೊರಾದಾಬಾದ್ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ತಿಳಿಸಿದ್ದಾರೆ.

ದಂಪತಿಗಳಿಬ್ಬರು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ದಂಪತಿಯ ಸಂಬಂಧಿಕರು ಮತ್ತು ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರ ನಡುವಿನ ಜಗಳ ಜೋರಾಗಿತ್ತು. ಮದುವೆ ಸಮಾರಂಭದಲ್ಲಿ ಮೊಬೈಲ್ ಕಳೆದುಕೊಂಡಿದ್ದ ನಂತರ ದಂಪತಿ ನಿರಂತರ ಜಗಳವಾಡುತ್ತಿದ್ದರು.

ಜೂನ್ 13ರ ರಾತ್ರಿ ಅನೇಕ್ ಪಾಲ್ ಮನೆಯಲ್ಲಿ ವಿಚಿತ್ರ ರೀತಿಯ ಪೂಜೆಯನ್ನು ಮಾಡಿ ನಂತರ ತನ್ನ ಹೆಂಡತಿಯನ್ನು ತಬ್ಬಿಕೊಂಡಿದ್ದಾನೆ ಎಂದು ಕುಮಾರ್ ಹೇಳಿದರು. ತನ್ನ ಹೆಂಡತಿಯನ್ನು ತಬ್ಬಿಕೊಂಡ ನಂತರ ಅವನು ಗುಂಡು ಹಾರಿಸಿದ್ದಾನೆ. ಅದೇ ಗುಂಡು ಅನೇಕ್ ಪಾಲ್ ಎದೆಗೆ ತಾಗಿ ಬೆನ್ನಿನ ಮೂಲಕ ಹಾದು ಹೋಗಿತ್ತು. ಗುಂಡು ತಗುಲಿ ಇಬ್ಬರಿಗೂ ಗಾಯಗಳಾಗಿತ್ತು. ಆಸ್ಪತ್ರೆಗೆ ಕರೆದೊಯ್ದರೂ ಉಳಿಸಲು ಸಾಧ್ಯವಾಗಲಿಲ್ಲ. ದಂಪತಿ ಸಾವಿನಿಂದ ಅವರ ನಾಲ್ವರು ಮಕ್ಕಳು ಅನಾಥರಾಗಿದ್ದಾರೆ. 

ಶೂಟ್ ಮಾಡುವ ಮುನ್ನ ಪತಿ ವಾಮಾಚಾರ ಮಾಡಿದ್ದಾನಾ?
ಮೃತ ದಂಪತಿಯ ಸಂಬಂಧಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಬಳಸಲಾದ ಗನ್ ದೇಶಿ ನಿರ್ಮಿತವಾಗಿದೆ. ಅನೇಕ್ ಪಾಲ್ ಗೆ ಈ ಗನ್ ಎಲ್ಲಿಂದ ಮತ್ತು ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆಗೂ ಮುನ್ನ ಪತಿ ವಾಮಾಚಾರ ಮಾಡಿದ್ದಾನೆ ಎಂದು ನಂಬಲಾಗಿದೆ. ಈ ಬಗ್ಗೆಯೂ ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವರ್ತನೆ ಬದಲಿಸಿಕೊಳ್ಳಿ, ಒಪ್ಪಂದ ಸಂಪೂರ್ಣವಾಗಿ ಪಾಲಿಸಬೇಕು: ಇರಾನ್‌ಗೆ JD ವ್ಯಾನ್ಸ್ ಎಚ್ಚರಿಕೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7ರಲ್ಲಿ 5 ಸ್ಥಾನ ಕಾಂಗ್ರೆಸ್ ಪಾಲು, ಬಿಜೆಪಿಗೆ 2, ಜೆಡಿಎಸ್‌ಗೆ ಅಡ್ಡ ಮತದಾನದ ಆಘಾತ

ಪರಿಷತ್ ಚುನಾವಣೆ: ಬಿಜೆಪಿಯ 3 ಶಾಸಕರಿಂದ ಅಡ್ಡಮತದಾನ, ಸಿಕ್ಕೇ ಸಿಗ್ತಾರೆ.. ಶಿಸ್ತುಕ್ರಮ ಗ್ಯಾರಂಟಿ: R Ashok

BJP-JDS ಅಡ್ಡ ಮತದಾನದಿಂದ Congress 5ನೇ ಅಭ್ಯರ್ಥಿ ಜಯ; ಇದು ಪ್ರಜಾಪ್ರಭುತ್ವದ ಗೆಲುವು: ಸುರ್ಜೇವಾಲಾ

Bihar Horror: ಯಜಮಾನನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ, ಗುಪ್ತಾಂಗದಲ್ಲಿ ಜೀವಂತ ಬುಲೆಟ್, ಕಲ್ಲು, ಮರದ ತುಂಡು ಪತ್ತೆ!

SCROLL FOR NEXT