ಬಾಹುಬಲಿ ಸಮೋಸಾ 
ದೇಶ

12 ಕೆಜಿ ತೂಕದ 'ಬಾಹುಬಲಿ' ಸಮೋಸಾ: 30 ನಿಮಿಷಗಳಲ್ಲಿ ತಿನ್ನಿರಿ, 71,000 ರೂ. ಗೆಲ್ಲಿರಿ!

ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಏನೆಂದರೆ, ಬರೋಬ್ಬರಿ 12 ಕಿಲೋಗ್ರಾಂಗಳಷ್ಟು ತೂಕವಿರುವ ಈ ದೈತ್ಯ ಸಮೋಸಾವನ್ನು ಕತ್ತರಿಸುವ ಮೂಲಕ ನೀವು ನಿಮ್ಮ ಜನ್ಮದಿನವನ್ನು ಆಚರಿಸಿರಿ ಅಥವಾ 30 ನಿಮಿಷಗಳಲ್ಲಿ ಡೀಪ್ ಫ್ರೈ ಮಾಡಿದ ಈ ತಿಂಡಿ ತಿಂದು 71,000 ರೂ. ಗೆಲ್ಲಿರಿ.

ಮೀರತ್: ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಏನೆಂದರೆ, ಬರೋಬ್ಬರಿ 12 ಕಿಲೋಗ್ರಾಂಗಳಷ್ಟು ತೂಕವಿರುವ ಈ ದೈತ್ಯ ಸಮೋಸಾವನ್ನು ಕತ್ತರಿಸುವ ಮೂಲಕ ನೀವು ನಿಮ್ಮ ಜನ್ಮದಿನವನ್ನು ಆಚರಿಸಿರಿ ಅಥವಾ 30 ನಿಮಿಷಗಳಲ್ಲಿ ಡೀಪ್ ಫ್ರೈ ಮಾಡಿದ ಈ ತಿಂಡಿ ತಿಂದು 71,000 ರೂ. ಗೆಲ್ಲಿರಿ.

ಇಲ್ಲಿನ ಲಾಲ್ಕುರ್ತಿ ಮೂಲದ ಕೌಶಲ್ ಸ್ವೀಟ್ಸ್‌ನ ಮೂರನೇ ತಲೆಮಾರಿನ ಮಾಲೀಕ ಶುಭಂ ಕೌಶಲ್, ಸಮೋಸಾವನ್ನು ಜನಮಾನಸದಲ್ಲಿ ಉಳಿಯುವಂತೆ ಮಾಡಲು 'ಏನಾದರೂ ವಿಭಿನ್ನ'ವಾಗಿ ಮಾಡಲು ಬಯಸಿದ್ದೇನೆ ಎಂದು ಹೇಳುತ್ತಾರೆ.

ನಂತರ, 12 ಕಿಲೋಗ್ರಾಂ ತೂಗುವ 'ಬಾಹುಬಲಿ' ಸಮೋಸವನ್ನು ರಚಿಸುವ ಆಲೋಚನೆ ಅವರಿಗೆ ಹೊಳೆಯಿತು. ಜನರು 'ಬಾಹುಬಲಿ' ಸಮೋಸಾಗಳನ್ನು ಆರ್ಡರ್ ಮಾಡುತ್ತಾರೆ ಮತ್ತು ಸಾಂಪ್ರದಾಯಿಕ ಕೇಕ್ ಬದಲಿಗೆ ತಮ್ಮ ಹುಟ್ಟುಹಬ್ಬದಂದು ಅದನ್ನು ಕತ್ತರಿಸಲು ಬಯಸುತ್ತಾರೆ ಎಂದು ಕೌಶಲ್ ಹೇಳುತ್ತಾರೆ.

ಆಲೂಗಡ್ಡೆ, ಬಟಾಣಿ, ಮಸಾಲೆ ಪದಾರ್ಥಗಳು, ಪನೀರ್ ಮತ್ತು ಡ್ರೈ ಫ್ರೂಟ್ಸ್ ತುಂಬಿದ ಈ ಸಮೋಸಾವನ್ನು 30 ನಿಮಿಷಗಳಲ್ಲಿ ತಿಂದು ಮುಗಿಸಿದರೆ, 71,000 ರೂಪಾಯಿ ಗೆಲ್ಲುವ ಅವಕಾಶ ಕೂಡ ಇದೆ ಎಂದು ಅವರು ಹೇಳಿದರು.

ದೈತ್ಯ ಸಮೋಸವನ್ನು ತಯಾರಿಸಲು ಕೌಶಲ್ ಅವರ ಅಂಗಡಿಯಲ್ಲಿ ಬಾಣಸಿಗರಿಗೆ ಸುಮಾರು ಆರು ಗಂಟೆಗಳು ಬೇಕಾಯಿತು.
ಈ ಸಮೋಸಾದ ಮಸಾಲೆಯನ್ನು ಪ್ಯಾನ್‌ನಲ್ಲಿ ಹುರಿಯಲು 90 ನಿಮಿಷಗಳು ಮತ್ತು ಮೂವರು ಅಡುಗೆಯವರ ಪ್ರಯತ್ನಗಳು ಬೇಕಾಗುತ್ತವೆ ಎಂದು ಅಂಗಡಿ ಮಾಲೀಕರು ಹೇಳಿದರು.

12 ಕಿಲೋಗ್ರಾಂಗಳ ಸಮೋಸಾದಲ್ಲಿ, ಸುಮಾರು ಏಳು ಕೆಜಿ ಪೇಸ್ಟ್ರಿ ಕೋನ್‌ನಲ್ಲಿ ಪ್ಯಾಕ್ ಮಾಡಲಾದ ಖಾರದ ಪದಾರ್ಥವಾಗಿದೆ.
'ನಮ್ಮ ಬಾಹುಬಲಿ ಸಮೋಸಾವು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ಅಂಗಡಿಗೆ ಆಗಾಗ್ಗೆ ಬರುವ ಫುಡ್ ಬ್ಲಾಗರ್‌ಗಳ ಗಮನವನ್ನೂ ಸೆಳೆದಿದೆ. ನಾವು ಸ್ಥಳೀಯರು ಮತ್ತು ದೇಶದ ಇತರ ಭಾಗಗಳಲ್ಲಿ ವಾಸಿಸುವ ಜನರಿಂದಲೂ ಈ ಬಗ್ಗೆ ಪ್ರಶ್ನೆಗಳನ್ನು ಪಡೆಯುತ್ತಿದ್ದೇವೆ. ನಾವು ಸಮೋಸಾಕ್ಕಾಗಿ ಮುಂಗಡ ಆರ್ಡರ್‌ಗಳನ್ನು ಮಾತ್ರ ತೆಗೆದುಕೊಳ್ಳುತ್ತೇವೆ' ಎಂದು ಕೌಶಲ್ ಹೇಳಿದರು.

'ಸಮೋಸವು ಜನರ ಗಮನ ಸೆಳೆಯುವಂತೆ ಮಾಡಲು ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ಬಯಸಿದೆ. ನಾವು 'ಬಾಹುಬಲಿ' ಸಮೋಸವನ್ನು ಮಾಡಲು ನಿರ್ಧರಿಸಿದೆವು. ಮೊದಲು, ನಾವು ನಾಲ್ಕು ಕೆಜಿಯ ಸಮೋಸವನ್ನು ಮಾಡಲು ಪ್ರಾರಂಭಿಸಿದೆವು ಮತ್ತು ನಂತರ ಎಂಟು ಕೆ.ಜಿ ತೂಕದ ಸಮೋಸಗಳನ್ನು ಮಾಡಿದ್ದೇವೆ. ಇವೆರಡೂ ಜನಪ್ರಿಯವಾಗಿವೆ. ನಂತರ ನಾವು 12 ಕೆಜಿ ಸಮೋಸಾವನ್ನು ಸಿದ್ಧಪಡಿಸಿದ್ದೇವೆ' ಎಂದು ಕೌಶಲ್ ಹೇಳಿದರು.

ಈ 12 ಕೆಜಿ ತೂಕದ ಸಮೋಸಾ ಬೆಲೆ ಸುಮಾರು 1,500 ರೂ. ಆಗಿದೆ. 'ಬಾಹುಬಲಿ' ಸಮೋಸಾಗಳಿಗಾಗಿ ತನಗೆ ಇದುವರೆಗೆ ಸುಮಾರು 40-50 ಆರ್ಡರ್‌ಗಳು ಬಂದಿವೆ. ಈ ಸಮೋಸಾ ದೇಶದಲ್ಲೇ ಅತಿ ದೊಡ್ಡ ಸಮೋಸಾವಾಗಿದೆ ಎಂದು ಕೌಶಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT