ಮಣಿಪುರದಲ್ಲಿ ಮೈಟೆಯಿ ಮತ್ತು ಕುಕಿ ಸಮುದಾಯದ ಜನರ ನಡುವೆ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ಖಂಡಿಸಿ ಮಹಿಳೆಯರು ಮಾನವ ಸರಪಳಿ ನಿರ್ಮಿಸಿ ಪ್ರತಿಭತನೆ ನಡೆಸಿದರು 
ದೇಶ

ಪ್ರಜಾಪ್ರಭುತ್ವದಲ್ಲಿ ಹಿಂಸೆ, ದ್ವೇಷಕ್ಕೆ ಆಸ್ಪದವಿಲ್ಲ: ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಸಹಕರಿಸಲು ಜನತೆಗೆ RSS ಕರೆ

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಜ್ಯದಲಿ ಶಾಂತಿಯ ಮರುಸ್ಥಾಪನೆಗಾಗಿ ಸಹಕರಿಸುವಂತೆ ಜನತೆ, ಆಡಳಿತಕ್ಕೆ ಕರೆ ನೀಡಿದೆ.

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಜ್ಯದಲಿ ಶಾಂತಿಯ ಮರುಸ್ಥಾಪನೆಗಾಗಿ ಸಹಕರಿಸುವಂತೆ ಜನತೆ, ಆಡಳಿತಕ್ಕೆ ಕರೆ ನೀಡಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕೆಂದು ವಿಪಕ್ಷಗಳು ಹಾಗೂ ಮಣಿಪುರದ ಜನತೆಯ ಪೈಕಿ ಒಂದು ವರ್ಗ ಆಗ್ರಹಿಸುತ್ತಿರುವುದರ ನಡುವೆ ಆರ್ ಎಸ್ಎಸ್ ನ ಮನವಿ ಬಂದಿದೆ.

ಮಣಿಪುರದಲ್ಲಿ ಕಳೆದ 45 ದಿನಗಳಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ. ಲಾಯ್ ಹರೋಬಾ ಹಬ್ಬದ ಸಂದರ್ಭದಲ್ಲಿ ಮೇ.03 ರಂದು ಚುರಚಂದ್ಪುರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯ ನಂತರ ಉಂಟಾದ ಹಿಂಸಾಚಾರ ಹಾಗೂ ಅನಿಶ್ಚಿತತೆ ಖಂಡನೀಯವಾಗಿದೆ ಎಂದು ಆರ್ ಎಸ್ಎಸ್ ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಟ್ವಿಟರ್ ನಲ್ಲಿ ಮೂಲಕ ನೀಡಿದ್ದಾರೆ. 

ಶತಮಾನಗಳಿಂದ ಪರಸ್ಪರ ಸೌಹಾರ್ದತೆ ಹಾಗೂ ಸಹಕಾರದಿಂದ ಬದುಕುತ್ತಿರುವವರ ನಡುವೆ ಅಶಾಂತಿ ಮತ್ತು ಹಿಂಸೆಯ ಅಲೆ ಎದ್ದಿರುವುದು, ಇನ್ನೂ ತಹಬದಿಗೆ ಬಾರದೇ ಇರುವುದು ದುರದೃಷ್ಟಕರ ಎಂದು ಆರ್ ಎಸ್ಎಸ್ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT