ಅಲಹಾಬಾದ್ ಹೈಕೋರ್ಟ್ 
ದೇಶ

ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ ನಿಷಿದ್ಧ: ಲಿವಿಂಗ್‌ ಟುಗೆದರ್‌ ವಿರುದ್ಧ ಅಲಹಾಬಾದ್ ಹೈಕೋರ್ಟ್ ತೀರ್ಪು

ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ಹಾಗೂ ದಿಟ್ಟಿಸುವಿಕೆಗೆ ನಿಷೇಧ ಇದೆ ಎಂದು ಅಲಹಾಬಾದ್‌ ಹೈಕೋರ್ಟ್‌ ಆದೇಶ ನೀಡಿದೆ. ಈ ಮೂಲಕ ಮುಸ್ಲಿಂ ಜೋಡಿಯ ಲಿವಿಂಗ್‌ ಟುಗೆದರ್‌ ವಿರುದ್ಧ ಪರೋಕ್ಷವಾಗಿ ತೀರ್ಪು ನೀಡಿದೆ.

ಲಕ್ನೋ: ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ಹಾಗೂ ದಿಟ್ಟಿಸುವಿಕೆಗೆ ನಿಷೇಧ ಇದೆ ಎಂದು ಅಲಹಾಬಾದ್‌ ಹೈಕೋರ್ಟ್‌ ಆದೇಶ ನೀಡಿದೆ. ಈ ಮೂಲಕ ಮುಸ್ಲಿಂ ಜೋಡಿಯ ಲಿವಿಂಗ್‌ ಟುಗೆದರ್‌ ವಿರುದ್ಧ ಪರೋಕ್ಷವಾಗಿ ತೀರ್ಪು ನೀಡಿದೆ.

ಲಿವ್‌ ಇನ್‌ ಸಂಬಂಧದಲ್ಲಿರುವ ಅಂತರ್‌ಧರ್ಮೀಯ ಜೋಡಿಯೊಂದು, ತಮಗೆ ಯುವತಿಯ ಕುಟುಂಬದಿಂದ ಹಾಗೂ ಪೊಲೀಸರಿಂದ ಕಿರುಕುಳವಾಗುತ್ತಿದೆ. ಹೀಗಾಗಿ ರಕ್ಷಣೆ ನೀಡಿ ಎಂದು ಹೈಕೋರ್ಟ್‌ ಮೊರೆ ಹೋಗಿತ್ತು. ಇದನ್ನು ವಜಾಗೊಳಿಸಿದ ಕೋರ್ಟು, ಈ ಮೇಲಿನ ಅಭಿಪ್ರಾಯ ಹೇಳಿದೆ. ಈ ಮೂಲಕ ಲಿವ್‌ ಇನ್‌ ಸಂಬಂಧಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆ.

ಮದುವೆಗೆ ಮುನ್ನ ಯಾವುದೇ ಲೈಂಗಿಕ, ಕಾಮಪ್ರಚೋದಕ, ಪ್ರೀತಿಯಿಂದ ಚುಂಬಿಸುವುದು, ಸ್ಪರ್ಶಿಸುವುದು, ನೋಡುವುದು ಇತ್ಯಾದಿಗಳನ್ನು ಇಸ್ಲಾಂನಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದೆ. ಗಂಡ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಭೋಗವನ್ನು ಹೊರತುಪಡಿಸಿ ಯಾವುದೇ ಲೈಂಗಿಕ ಸಂಭೋಗ  ಝಿನಾ ಎಂದು ವ್ಯಾಖ್ಯಾನಿಸಲಾಗಿದೆ.

ವಿವಾಹೇತರ ಲೈಂಗಿಕತೆ ಮತ್ತು ವಿವಾಹಪೂರ್ವ ಲೈಂಗಿಕತೆ ಎರಡನ್ನೂ ಒಳಗೊಂಡಿರುತ್ತದೆ ಮತ್ತು ಇದನ್ನು ಇಂಗ್ಲಿಷ್‌ನಲ್ಲಿ ವ್ಯಭಿಚಾರ ಎಂದು ಅನುವಾದಿಸಲಾಗುತ್ತದೆ.

ಇಸ್ಲಾಂನಲ್ಲಿ ಗಂಡ-ಹೆಂಡತಿ ಬಿಟ್ಟು ಇತರರ ನಡುವೆ (ಅನೈತಿಕ ಸಂಬಂಧ ಹಾಗೂ ವಿವಾಹಪೂರ್ವ ಲೈಂಗಿಕತೆ) ಲೈಂಗಿಕ ಕ್ರಿಯೆ ನಡೆಸುವುದು ನಿಷಿದ್ಧ. ಇದಕ್ಕೆ ‘ಝೀನಾ’ ಎನ್ನುತ್ತಾರೆ. ಅಂತೆಯೇ ವಿವಾಹದ ಮುನ್ನವೇ ಚುಂಬನ, ಗುರಾಯಿಸುವುದು ಹಾಗೂ ಸ್ಪರ್ಶಿಸುವುದು ಕೂಡ ಇಸ್ಲಾಂ ಪ್ರಕಾರ ‘ಹರಾಮ್‌’ ಆಗಿದೆ’ ಎಂದು ಕೋರ್ಚ್‌ ಅಭಿಪಟ್ಟಿತು ಹಾಗೂ ರಕ್ಷಣೆ ಕೋರಿದ್ದ ಜೋಡಿಯ ಅರ್ಜಿ ವಜಾ ಮಾಡಿತು.

ಮಹಿಳೆಯ ತಾಯಿ ತಮ್ಮ ಲಿವ್-ಇನ್ ಸಂಬಂಧದಿಂದ ಅತೃಪ್ತರಾಗಿದ್ದಾರೆ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಅಂತರ್‌ಧರ್ಮೀಯ ದಂಪತಿಗಳು ಸಲ್ಲಿಸಿದ ರಕ್ಷಣೆ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ಫಿಕ್ಸ್; ಹೀಗಿದೆ ನಾಡಹಬ್ಬದ ವೇಳಾಪಟ್ಟಿ...

ಆರ್ ಎಸ್ಎಸ್ ಸಭೆ ನಡೆದಾಗಲೆಲ್ಲಾ ಅನೇಕ ಅನಾಹುತಗಳಾಗಿವೆ- ಬಿಕೆ ಹರಿಪ್ರಸಾದ್