ದೇಶ

ಜಮ್ಮು-ಕಾಶ್ಮೀರದ SKIMS ಆರೋಗ್ಯ ಸಂಸ್ಥೆ ಸ್ವಾಯತ್ತತೆ ಕಿತ್ತೊಗೆದ ಸರ್ಕಾರ: ಸ್ಥಳೀಯ ರಾಜಕಾರಣಿಗಳಿಂದ ವಿರೋಧ

Srinivas Rao BV

ಶ್ರೀನಗರ: ಜಮ್ಮು-ಕಾಶ್ಮೀರದ ಆಡಳಿತ ಕಣಿವೆಯ ಪ್ರಧಾನ ಉನ್ನತ ಆರೈಕೆ ಆರೋಗ್ಯ ಸಂಸ್ಥೆ ಶೇರ್-ಎ-ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಎಸ್ ಕೆಐಎಂಎಸ್) ನ ಸ್ವಾಯತ್ತ ಸ್ಥಾನಮಾನವನ್ನು ತೆಗೆದುಹಾಕಿದ್ದು, ಸ್ಥಳೀಯ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
 
ಎಸ್ ಕೆಐಎಂಎಸ್ ನ ಆಡಳಿತವನ್ನು ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆಗೆ ವಹಿಸಲಾಗಿದೆ ಎಂದು ಎಸ್ ಕೆಐಎಂಎಸ್ ನ ನಿರ್ದೇಶಕರಿಗೆ ಸಾಮಾನ್ಯ ಆಡಳಿತ ಇಲಾಖೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಪ್ರಸ್ತಾವನೆಗಳು, ಕೇಸ್ ಕಡತಗಳು ಸೇರಿದಣ್ತೆ ಎಲ್ಲಾ ವಿಷಯಗಳನ್ನೂ ಪರಿಗಣಿಸುವುದಕ್ಕೆ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಮೂಲಕ ಸಕ್ಷಮ ಪ್ರಾಧಿಕಾರದ (ಎಚ್‌ಎಲ್‌ಜಿ) ಅನುಮೋದನೆಗೆ ಕಳಿಸಬೇಕು ಎಂದು ಅಧೀಕ ನಾರ್ಯದರ್ಶಿಗಳು ತಿಳಿಸಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಸ್ಥಳೀಯ ರಾಜಕಾರಣಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು,  ತಕ್ಷಣವೇ ನಿರ್ಧಾರವನ್ನು ಹಿಂಪಡೆಯಬೇಕೆಂಬ ಆಗ್ರಹ ಮುಂದಿಟ್ಟಿವೆ.
 
ಎನ್ ಸಿ ವಕ್ತಾರ ತನ್ವೀರ್ ಸಾದಿಕ್ ಈ ಬಗ್ಗೆ ಮಾತನಾಡಿದ್ದು, ಈ ಹೆಲ್ತ್‌ಕೇರ್ ಸಂಸ್ಥೆಯನ್ನು ನಾಲ್ಕು ದಶಕಗಳ ಹಿಂದೆ ಎನ್‌ಸಿ ಸಂಸ್ಥಾಪಕ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರು 'ಶೇರ್-ಎ-ಕಾಶ್ಮೀರ್' ಎಂದು ಸ್ಥಾಪಿಸಿದ್ದರು. ಇದರ ಸ್ವಾಯತ್ತತೆಯನ್ನು ತೆಗೆದು ಸರ್ಕಾರದ ವ್ಯಾಪ್ತಿಗೆ ತರುವುದು ಸರ್ಕಾರದ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಎಂಬ ಘೋಷಣೆಗೆ ವಿರುದ್ಧವಾಗಿದೆ, ಸಂಸ್ಥೆಗೆ ಈಗಿನ ವ್ಯವಸ್ಥೆ ಮಲತಾಯಿ ಧೋರಣೆ ತೋರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

SCROLL FOR NEXT