ದೇಶ

ನಾಗಾಲ್ಯಾಂಡ್‌: 60 ವರ್ಷಗಳ ನಂತರ ಮೊದಲ ಬಾರಿ ಮಹಿಳಾ ಶಾಸಕಿ ಆಯ್ಕೆ; ಎನ್‌ಡಿಪಿಪಿಯ ಹೆಖಾನಿ ಜಖಾಲು ಗೆ ಐತಿಹಾಸಿಕ ಗೆಲುವು!

Shilpa D

ಕೊಹಿಮಾ: ನಾಗಾಲ್ಯಾಂಡ್  ರಾಜ್ಯ ಸ್ಥಾನಮಾನ ಪಡೆದ 60 ವರ್ಷಗಳ ನಂತರ ಇಂದು ಮೊದಲ ಬಾರಿ ಮಹಿಳಾ ಶಾಸಕಿ ಆಯ್ಕೆಯಾಗಿದ್ದಾರೆ.

ಬಿಜೆಪಿಯ ಮಿತ್ರಪಕ್ಷವಾದ ಎನ್‌ಡಿಪಿಪಿಯ ಹೆಕಾನಿ ಜಖಾಲು ಅವರು ದಿಮಾಪುರ್ 3 ಕ್ಷೇತ್ರದಿಂದ ಗೆದ್ದಿದ್ದಾರೆ. ನಾಗಾಲ್ಯಾಂಡ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 183 ಅಭ್ಯರ್ಥಿಗಳ ಪೈಕಿ ನಾಲ್ವರು ಮಹಿಳೆಯರಲ್ಲಿ 48 ವರ್ಷದ ವಕೀಲೆ ಹೆಕಾನಿ ಜಖಾಲು ಒಬ್ಬರು.

ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ ಪರವಾಗಿ ಹೋರಾಡಿದ ಜಖಾಲು 1,500 ಕ್ಕೂ ಹೆಚ್ಚು ಮತಗಳ ಅಂತರದಿಂದ ಎಲ್‌ಜೆಪಿ (ರಾಮ್ ವಿಲಾಸ್) ನ ಅಜೆಟೊ ಝಿಮೊಮಿ ಅವರನ್ನು ಸೋಲಿಸಿದ್ದಾರೆ.

ವೃತ್ತಿಯಲ್ಲಿ ವಕೀಲೆಯಾಗಿರುವ ಜಖಾಲು ಕಳೆದ ಎರಡು ದಶಕಗಳಿಂದ ಸರ್ಕಾರೇತರ ಸಂಸ್ಥೆ "ಯೂತ್‌ನೆಟ್ ನಾಗಾಲ್ಯಾಂಡ್" ಎಂಬ ಎನ್ ಜಿ ಒ ನಡೆಸುತ್ತಿದ್ದಾರೆ. ಈ ಮೂಲಕ ಅಧ್ಯಯನ ಮಾಡಲು ಬಯಸುವ ಸಾವಿರಾರು ಯುವಕರಿಗೆ ಸಹಾಯ ಮಾಡುತ್ತಿದ್ದಾರೆ. .

ನಾಗಾಲ್ಯಾಂಡ್‌ನ 60 ವಿಧಾನಸಭಾ ಕ್ಷೇತ್ರಗಳ ಪೈಕಿ 59 ಕ್ಷೇತ್ರಗಳಲ್ಲಿ ಸೋಮವಾರ ವಿಧಾನಸಭೆ ಚುನಾವಣೆ ನಡೆದಿದ್ದು, 13.16 ಲಕ್ಷ ಮತದಾರರ ಪೈಕಿ ಶೇ.85.90ರಷ್ಟು ಮತದಾರರು ಮತ ಚಲಾಯಿಸಿದ್ದಾರೆ.

SCROLL FOR NEXT