ಸಂಗ್ರಹ ಚಿತ್ರ 
ದೇಶ

ಧೋನಿ, ಅಭಿಷೇಕ್ ಬಚ್ಚನ್ ಪ್ಯಾನ್ ವಿವರಗಳ ಬಳಸಿ ಕ್ರೆಡಿಟ್ ಕಾರ್ಡ್ ವಂಚನೆ: 5 ಮಂದಿ ಬಂಧನ

ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಹೆಸರಿನಲ್ಲಿ ನಕಲಿ ಕ್ರೆಡಿಟ್ ಕಾರ್ಡ್ ಪಡೆದು ವಂಚಿಸುತ್ತಿದ್ದ ವ್ಯವಸ್ಥಿತ ಸೈಬರ್ ಕ್ರೈಮ್ ದಂಧೆಯೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.

ನವದೆಹಲಿ: ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಹೆಸರಿನಲ್ಲಿ ನಕಲಿ ಕ್ರೆಡಿಟ್ ಕಾರ್ಡ್ ಪಡೆದು ವಂಚಿಸುತ್ತಿದ್ದ ವ್ಯವಸ್ಥಿತ ಸೈಬರ್ ಕ್ರೈಮ್ ದಂಧೆಯೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ.

ವಂಚಕರು ಆನ್‌ಲೈನ್‌ನಲ್ಲಿ ಲಭ್ಯವಿರುವ ಬಾಲಿವುಡ್ ನಟರು ಮತ್ತು ಕ್ರಿಕೆಟಿಗರ ಜಿಎಸ್‌ಟಿ ಗುರುತಿನ ಸಂಖ್ಯೆಗಳಿಂದ ಪ್ಯಾನ್ ವಿವರಗಳನ್ನು ಪಡೆದುಕೊಂಡು ಅವುಗಳನ್ನು ಬಳಸಿ ಪುಣೆ ಮೂಲದ ಫಿನ್‌ಟೆಕ್ ಸ್ಟಾರ್ಟ್ಅಪ್ 'ಒನ್ ಕಾರ್ಡ್'ನಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ.

ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ, ಬಾಲಿವುಡ್ ತಾರೆಯರಾದ ಅಭಿಷೇಕ್ ಬಚ್ಚನ್, ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಇಮ್ರಾನ್ ಹಶ್ಮಿ ಅವರ ಹೆಸರು ಮತ್ತು ವಿವರಗಳನ್ನು ವಂಚಕರು ಬಳಸಿದ್ದಾರೆ. ಅಲ್ಲದೆ, ಈ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ರೂ.50 ಲಕ್ಷವನ್ನೂ ವಂಚಿಸಿದ್ದಾರೆ. ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

"ಈ ವಿಷಯದ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ, ನಾವು ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪುನೀತ್, ಮೊಹಮ್ಮದ್ ಆಸಿಫ್, ಸುನೀಲ್ ಕುಮಾರ್, ಪಂಕಜ್ ಮಿಶಾರ್ ಮತ್ತು ವಿಶ್ವ ಭಾಸ್ಕರ್ ಶರ್ಮಾ ಎಂದು ಗುರುತಿಸಲಾಗಿದೆ.

‘ವಿಚಾರಣೆ ವೇಳೆ ವಂಚನೆಗೆ ಸಂಬಂಧಿಸಿದ ಕಾರ್ಯಾಚರಣೆಯ ವಿಧಾನವನ್ನು ಆರೋಪಿಗಳು ಬಿಚ್ಚಿಟ್ಟಿದ್ದಾರೆ. ಈ ಸೆಲೆಬ್ರಿಟಿಗಳ ಜಿಎಸ್‌ಟಿ ವಿವರಗಳನ್ನು ಆರೋಪಿಗಳು ಗೂಗಲ್‌ನಲ್ಲಿ ಪಡೆಯುತ್ತಿದ್ದರು. ಜಿಎಸ್‌ಟಿಯ ಮೊದಲೆರಡು ಸಂಖ್ಯೆಗಳು ಸ್ಟೇಟ್ ಕೋಡ್ ಮತ್ತು ನಂತರದ ಸಂಖ್ಯೆಗಳು ಪ್ಯಾನ್ ಸಂಖ್ಯೆಗಳು ಎಂಬುದು ಆರೋಪಿಗಳಿಗೆ ತಿಳಿದಿತ್ತು.

ವಾಮಮಾರ್ಗದ ಮೂಲಕ ಪ್ಯಾನ್‌ ಕಾರ್ಡ್‌ಗಳನ್ನು ತಯಾರಿಸಿ ಅವುಗಳ ಮೇಲೆ ತಮ್ಮ ಚಿತ್ರಗಳನ್ನು ಹಾಕಿಕೊಳ್ಳುತ್ತಿದ್ದರು. ವೀಡಿಯೊ ಪರಿಶೀಲನೆಯ ಸಮಯದಲ್ಲಿ ಚಿತ್ರ ಹೊಂದಿಕೆಯಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಉದಾಹರಣೆಗೆ, ಅಭಿಷೇಕ್ ಬಚ್ಚನ್ ಅವರ ಪ್ಯಾನ್ ಕಾರ್ಡ್‌ನಲ್ಲಿ ಅವರ ಪ್ಯಾನ್ ಮತ್ತು ಜನ್ಮ ದಿನಾಂಕವಿದೆ. ಆದರೆ, ಚಿತ್ರ ಮಾತ್ರ ಆರೋಪಿಗಳಲ್ಲಿ ಒಬ್ಬನದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT