ದೇಶ

ಅಣ್ಣಾಮಲೈ ಕಾರ್ಯನಿರ್ವಹಣೆ ಶೈಲಿ ವಿಚಾರದಲ್ಲಿ ಭಿನ್ನಾಭಿಪ್ರಾಯ: ಮತ್ತೋರ್ವ ಬಿಜೆಪಿ ನಾಯಕ ಪಕ್ಷಕ್ಕೆ ಗುಡ್ ಬೈ

Srinivas Rao BV

ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಅಣ್ಣಾಮಲೈ ಕಾರ್ಯನಿರ್ವಹಣೆ ಶೈಲಿಯ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಬಿಜೆಪಿಯ ಮತ್ತೋರ್ವ ನಾಯಕ ಪಕ್ಷ ತೊರೆದಿದ್ದಾರೆ.

ಬಿಜೆಪಿ ರಾಜ್ಯ ಐಟಿ ವಿಭಾಗದ ಕಾರ್ಯದರ್ಶಿ ದಿಲೀಪ್ ಕಣ್ಣನ್ ಪಕ್ಷ ತೊರೆಯುತ್ತಿರುವುದಾಗಿ ಘೋಷಿಸಿದ್ದಾರೆ. 

ತಾವು ಈ ನಿರ್ಧಾರವನ್ನು ಭಾರ ಹೃದಯದಿಂದ ಘೋಷಿಸುತ್ತಿರುವುದಾಗಿ ಕಣ್ಣನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಪಕ್ಷದ ಐಟಿ ವಿಭಾಗದ ಮುಖ್ಯಸ್ಥರಾದ ಸಿಟಿ ಆರ್ ನಿರ್ಮಲ್ ಕುಮಾರ್ ರಾಜೀನಾಮೆ ನೀಡಿದ್ದರು. ಕೇಂದ್ರ ಸಚಿವ ಎಲ್ ಮುರುಗನ್ ಪಕ್ಷವನ್ನು ಮುನ್ನಡೆಸಿದಾಗ ಅವರು ಹಲವು ಮಂದಿ ನಾಯಕರು ಬಿಜೆಪಿ ಸೇರ್ಪಡೆಗೊಳ್ಳುವಂತೆ ಮಾಡಿದ್ದರು ಎಂದು ಹೇಳಿದ್ದರು.

ಪಕ್ಷದ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಪಕ್ಷದಲ್ಲೇ ಹಲವರ ವಿರುದ್ಧ ಕಣ್ಗಾವಲಿರಿಸಿದ್ದಾರೆ ಎಂದು ಆರೋಪಿಸಿ ನಿರ್ಮಲ್ ಕುಮಾರ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಬಳಿಕ ಕುಮಾರ್ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷ ಸೇರ್ಪಡೆಗೊಂಡಿದ್ದಾರೆ.

 
ಸ್ವಪಕ್ಷೀಯರ ವಿರುದ್ಧವೇ ಕಣ್ಗಾವಲಿರಿಸುವ ವಿಚಾರವಾಗಿ ಸಂತೋಷಪಡುವುದಕ್ಕಿಂತಲೂ ಮಿಗಿಲಾದ ಕೀಳರಿಮೆ ಮತ್ತೊಂದು ಇಲ್ಲ ಎಂದು ಕುಮಾರ್ ಹೇಳಿದ್ದಾರೆ.
 
ಪಕ್ಷಕ್ಕೆ ಹಲವು ವರ್ಷಗಳಿಂದ ಕೆಲಸ ಮಾಡಿರುವವರನ್ನು ಕಡಿಮೆ ಎಂಬ ಭಾವನೆಯಿಂದ ನೋಡುವುದೇ ಅಣ್ಣಾಮಲೈ ಅವರ ಕೆಲಸವಾಗಿದೆ. ಪಕ್ಷದಲ್ಲಿರುವ ಶೇ.90 ರಷ್ಟು ಮಂದಿಗೆ ನಾನು ಹೇಳುತ್ತಿರುವುದು ನಿಜ ಎಂದು ತಿಳಿದಿದೆ. ಆದರೆ ಸಾಮಾಜಿಕ ಜಾಲತಾಣದ ಸ್ನೇಹಿತರು ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ. ಈ ವಾರ್ ರೂಮ್ ಬಣಗಳು ನನ್ನಂತೆ ಎಷ್ಟು ಮಂದಿಯನ್ನು ಓಡಿಸುತ್ತವೆ ಎಂಬುದನ್ನು ಕಾದು ನೋಡೋಣ, ”ಎಂದು ಕುಮಾರ್ ಹೇಳಿದರು.

ಅಧಿಕಾರ ವಹಿಸಿಕೊಂಡ ಬಳಿಕ ತಾವು 500 ಮಂದಿ ನಾಯಕರನ್ನು ಹುಟ್ಟುಹಾಕುತ್ತೇನೆ ಎಂದು ಅಣ್ಣಾಮಲೈ ಹೇಳಿರುವುದಾಗಿ ಕುಮಾರ್ ತಿಳಿಸಿದ್ದಾರೆ.

SCROLL FOR NEXT