ದೇಶ

1,487 ಗ್ರಾಂ ಚಿನ್ನ ಸಾಗಿಸುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ ಬಂಧಿಸಿದ ಕಸ್ಟಮ್ಸ್

Ramyashree GN

ಕೊಚ್ಚಿ: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ ತಿಳಿಸಿದೆ.

ವಯನಾಡು ಮೂಲದ ಶಫಿ ಎಂಬಾತನನ್ನು 1487 ಗ್ರಾಂ ಚಿನ್ನಾಭರಣದೊಂದಿಗೆ ಕೊಚ್ಚಿಯಲ್ಲಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ.

ಬಹ್ರೇನ್-ಕೋಯಿಕ್ಕೋಡ್-ಕೊಚ್ಚಿ ಸೇವೆಯ ಕ್ಯಾಬಿನ್ ಸಿಬ್ಬಂದಿ ಶಫಿ ಎಂಬಾತ ಚಿನ್ನ ಕಳ್ಳ ಸಾಗಣೆ ಮಾಡುತ್ತಿರುವುದಾಗಿ ಗೌಪ್ಯ ಮಾಹಿತಿ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್‌ಗೆ ಲಭಿಸಿತ್ತು. ಈ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. 

ಕೈಗಳಿಗೆ ಚಿನ್ನವನ್ನು ಸುತ್ತಿಕೊಂಡು ಅಂಗಿಯ ತೋಳನ್ನು ಮುಚ್ಚಿ ಹಸಿರು ಚಾನಲ್ ಮೂಲಕ ಹಾದುಹೋಗುವುದು ಆತನ ಗುರಿಯಾಗಿತ್ತು. ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಮಧ್ಯೆ, ಬುಧವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ 3.32 ಕೋಟಿ ಮೌಲ್ಯದ 6.8 ಕೆಜಿ ತೂಕದ ಚಿನ್ನವನ್ನು ಸಾಗಿಸಲು ಯತ್ನಿಸುತ್ತಿದ್ದ ಸಿಂಗಾಪುರದಿಂದ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಚೆನ್ನೈ ಕಸ್ಟಮ್ಸ್ ತಿಳಿಸಿದೆ.

ಅಧಿಕಾರಿಗಳ ಪ್ರಕಾರ, ಪ್ರಯಾಣಿಕರು ಸಿಂಗಾಪುರದಿಂದ AI-347 ಮತ್ತು 6E-52 ಮೂಲಕ ಚೆನ್ನೈಗೆ ಬಂದಿದ್ದರು.

ಚೆನ್ನೈ ಕಸ್ಟಮ್ಸ್ ಈ ಕುರಿತು ಟ್ವೀಟ್ ಮಾಡಿದ್ದು, 'ಗುಪ್ತಚರ ಮಾಹಿತಿ ಆಧರಿಸಿ, ಸಿಂಗಾಪುರದಿಂದ AI-347 ಮತ್ತು 6E-52 ಮೂಲಕ ಬಂದ 2 ಪ್ರಯಾಣಿಕರನ್ನು ಮಾರ್ಚ್ 07 ರಂದು ಕಸ್ಟಮ್ಸ್ ತಡೆಹಿಡಿದಿದೆ. ಅವರ ವಸ್ತುಗಳನ್ನು ಹುಡುಕಿದಾಗ, 3.32 ಕೋಟಿ ರೂ. ಮೌಲ್ಯದ ಒಟ್ಟು 6.8 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕರನ್ನು ಬಂಧಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

SCROLL FOR NEXT