ದೇಶ

ಛತ್ತೀಸ್‌ಗಢ: ಪೊಲೀಸ್ ಮಾಹಿತಿದಾರ ಎಂದು ಶಂಕಿಸಿ ಗ್ರಾಮಸ್ಥನನ್ನು ಹತ್ಯೆ ಮಾಡಿದ ನಕ್ಸಲರು

Lingaraj Badiger

ಗರಿಯಾಬಂದ್: ಛತ್ತೀಸ್‌ಗಢದ ಗರಿಯಾಬಂದ್ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರನೆಂದು ಶಂಕಿಸಿ 30 ವರ್ಷದ ವ್ಯಕ್ತಿಯೊಬ್ಬರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಅಮ್ಲಿಪದಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಛತ್ತೀಸ್‌ಗಢ ಮತ್ತು ಒಡಿಶಾ ಗಡಿಯಲ್ಲಿರುವ ಖಾರಿಪಾಠ ಗ್ರಾಮದಲ್ಲಿ ನಕ್ಸಲರ ಗುಂಪೊಂದು, ಗ್ರಾಮಸ್ಥನ ಮನೆಗೆ ನುಗ್ಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಕ್ಸಲರು ಗುಂಪು, ರಾಮ್‌ದರ್ ಎಂದು ಗುರುತಿಸಲಾದ ಗ್ರಾಮಸ್ಥನ ಮನೆಗೆ ನುಗ್ಗಿ, ಆತನನ್ನು ಬಲವಂತವಾಗಿ ಹತ್ತಿರದ ಕಾಡಿಗೆ ಕರೆದೊಯ್ದ ಹತ್ಯೆ ಮಾಡಲಾಗಿದೆ. ನಂತರ, ಇಂದು ಬೆಳಗ್ಗೆ ಗ್ರಾಮದಿಂದ ಸುಮಾರು 7 ಕಿಮೀ ದೂರದ ಕಾಡಿನಲ್ಲಿ ಆ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ ಎಂದು ಅವರು ತಿಳಿಸಿದ್ದಾರೆ.

"ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತಿಯನ್ನು ಕತ್ತು ಹಿಸುಕಿ ಕೊಲೆ ಮಾಡುವಂತೆ ತೋರುತ್ತಿದೆ. ಆದರೆ ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯುತ್ತದೆ" ಎಂದು ಅವರು ಹೇಳಿದ್ದಾರೆ.

SCROLL FOR NEXT