ಭೂಷಣ್ ದೇಸಾಯಿ - ಏಕನಾಥ್ ಶಿಂಧೆ 
ದೇಶ

ಮಹಾ ಸಿಎಂ ಶಿಂಧೆ ಬಣ ಸೇರಿದ ಉದ್ಧವ್ ಠಾಕ್ರೆ ಆಪ್ತ ಸುಭಾಷ್ ದೇಸಾಯಿ ಪುತ್ರ

ಮಹಾರಾಷ್ಟ್ರ ಮಾಜಿ ಕೈಗಾರಿಕಾ ಸಚಿವ ಮತ್ತು ಉದ್ಧವ್ ಠಾಕ್ರೆ ಅವರ ಆಪ್ತ ಸುಭಾಷ್ ದೇಸಾಯಿ ಅವರ ಪುತ್ರ ಭೂಷಣ್ ದೇಸಾಯಿ ಅವರು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.

ಮುಂಬೈ: ಮಹಾರಾಷ್ಟ್ರ ಮಾಜಿ ಕೈಗಾರಿಕಾ ಸಚಿವ ಮತ್ತು ಉದ್ಧವ್ ಠಾಕ್ರೆ ಅವರ ಆಪ್ತ ಸುಭಾಷ್ ದೇಸಾಯಿ ಅವರ ಪುತ್ರ ಭೂಷಣ್ ದೇಸಾಯಿ ಅವರು ಸೋಮವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರಿದ್ದಾರೆ.

ಸುಭಾಷ್ ದೇಸಾಯಿ ಅವರು ಹಲವು ವರ್ಷಗಳಿಂದ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬದ ಅತ್ಯಂತ ವಿಶ್ವಾಸಾರ್ಹ ನಾಯಕ ಆಗಿದ್ದಾರೆ.

ಸುಭಾಷ್ ದೇಸಾಯಿ ಪುತ್ರ ಶಿಂಧೆ ಬಣ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಶಿವಸೇನೆ(ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ಭೂಷಣ್ ಉದ್ಧವ್ ಬಣದಲ್ಲಿ ಇರಲಿಲ್ಲ ಎಂದು ಹೇಳಿದ್ದಾರೆ.

“ಸುಭಾಷ್ ದೇಸಾಯಿ ನಮ್ಮ ದೊಡ್ಡ ನಾಯಕ. ನಾವು ಅವರ ಮಾರ್ಗದರ್ಶನವನ್ನು ಅನುಸರಿಸುತ್ತೇವೆ. ಆದರೆ ಅವರ ಮಗ ನಮ್ಮೊಂದಿಗೆ ಇರಲಿಲ್ಲ. ವಾಷಿಂಗ್ ಮೆಷಿನ್‌ಗೆ ಹೋಗಲು ಬಯಸುವವರು ಹೋಗಬಹುದು ” ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ