ಮುಂಬೈ ಪೊಲೀಸ್ (ಸಾಂಕೇತಿಕ ಚಿತ್ರ) 
ದೇಶ

23 ವರ್ಷದ ಮಗಳಿಂದ ತಾಯಿಯ ಕೊಲೆ; ದೇಹದ ತುಂಡುಗಳನ್ನು 3 ತಿಂಗಳವರೆಗೆ ಮನೆಯಲ್ಲಿಟ್ಟುಕೊಂಡಿದ್ದ ಪಾತಕಿ!

55 ವರ್ಷದ ಮಹಿಳೆಯೊಬ್ಬರನ್ನು ಆಕೆಯ 23 ವರ್ಷದ ಮಗಳು ಹತ್ಯೆ ಮಾಡಿದ್ದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯಲ್ಲಿಟ್ಟುಕೊಂಡಿದ್ದ ಭಿಭತ್ಸ ಘಟನೆ ಮುಂಬೈ ನಲ್ಲಿ ವರದಿಯಾಗಿದೆ.

ಮುಂಬೈ: 55 ವರ್ಷದ ಮಹಿಳೆಯೊಬ್ಬರನ್ನು ಆಕೆಯ 23 ವರ್ಷದ ಮಗಳು ಹತ್ಯೆ ಮಾಡಿದ್ದು, ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮನೆಯಲ್ಲಿಟ್ಟುಕೊಂಡಿದ್ದ ಭಿಭತ್ಸ ಘಟನೆ ಮುಂಬೈ ನಲ್ಲಿ ವರದಿಯಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2022 ರ ಡಿಸೆಂಬರ್ ನಲ್ಲಿ ಮಹಿಳೆಯ ಹತ್ಯೆ ನಡೆದಿದೆ. ಅಂದಿನಿಂದ ಆಕೆಯ ದೇಹದ ತುಂಡುಗಳನ್ನು 23 ವರ್ಷದ ಮಹಿಳೆ ತನ್ನ ಕಪಾಟು ಹಾಗೂ ನೀರಿನ ಟ್ಯಾಂಕ್ ನಲ್ಲಿ ಇಟ್ಟಿದ್ದಳು ಎಂಬ ಮಾಹಿತಿ ಬಹಿರಂಗವಾಗಿದೆ.

ಇಷ್ಟು ತಿಂಗಳವರೆಗೆ ದೇಹದ ತುಂಡುಗಳನ್ನು ಹೇಗೆ ಸಂರಕ್ಷಿಸಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶವದ ಹೆಚ್ಚು ಕೊಳೆತ ಕೆಲವು ಭಾಗಗಳನ್ನು ಕಬೋರ್ಡ್‌ನೊಳಗೆ  ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಇರಿಸಲಾಗಿತ್ತು. ಉಳಿದ ಭಾಗಗಳನ್ನು ನೀರಿನ ಟ್ಯಾಂಕ್ ನಲ್ಲಿ ಹಾಕಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮಹಿಳೆಯರ ಸಂಬಂಧಿಕರು ಆ ಮನೆಗೆ ತೆರಳಿದ್ದಾಗ, ಮನೆಯ ಒಳಭಾಗದಿಂದ ಲಾಕ್ ಮಾಡಲಾಗಿತ್ತು. ಮನೆಯಲ್ಲಿ ದುರ್ವಾಸನೆಯ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
 
ಶವಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ. ಮೇಲ್ನೋಟಕ್ಕೆ ಡಿಸೆಂಬರ್ 2022 ರಲ್ಲಿ ಮಹಿಳೆಯ ಕೊಲೆಯಾಗಿರುವುದು ಕಂಡುಬಂದಿದೆ. ಕೊಲೆಗೆ ಕಾರಣವನ್ನು ತಿಳಿಯಲು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT