ಸಾಂದರ್ಭಿಕ ಚಿತ್ರ 
ದೇಶ

ಭಾರತದಲ್ಲಿ ಹೊಸ ಕೋವಿಡ್ ರೂಪಾಂತರ XBB 1.16: 76 ಮಾದರಿಗಳು ಪತ್ತೆ 

ದೇಶದಲ್ಲಿ ಇತ್ತೀಚಿಗೆ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೆ, ಹೊಸ ರೂಪಾಂತರ XBB ​​1.16 ನ 76 ಮಾದರಿಗಳು ಪತ್ತೆಯಾಗಿವೆ.  ಕರ್ನಾಟಕದಾದ್ಯಂತ 30, ಮಹಾರಾಷ್ಟ್ರ 29, ಪುದುಚೇರಿ 7, ದೆಹಲಿ 5, ತೆಲಂಗಾಣ 2 ಗುಜರಾತ್, ಹಿಮಾಚಾಲ ಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಮಾದರಿಗಳು ಕಂಡುಬಂದಿವೆ.

ನವದೆಹಲಿ: ದೇಶದಲ್ಲಿ ಇತ್ತೀಚಿಗೆ ಕೋವಿಡ್ ಪ್ರಕರಣಗಳ ಹೆಚ್ಚಳದ ಬೆನ್ನಲ್ಲೆ, ಹೊಸ ರೂಪಾಂತರ XBB ​​1.16 ನ 76 ಮಾದರಿಗಳು ಪತ್ತೆಯಾಗಿವೆ.  ಕರ್ನಾಟಕದಾದ್ಯಂತ 30, ಮಹಾರಾಷ್ಟ್ರ 29, ಪುದುಚೇರಿ 7, ದೆಹಲಿ 5, ತೆಲಂಗಾಣ 2 ಗುಜರಾತ್, ಹಿಮಾಚಾಲ ಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಮಾದರಿಗಳು ಕಂಡುಬಂದಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ INSACOG ಡೇಟಾ ಹೇಳಿದೆ.

ಜನವರಿಯಲ್ಲಿ ಮೊದಲ ಬಾರಿಗೆ ಎರಡು ಮಾದರಿಗಳ ಪರೀಕ್ಷೆ ನಡೆಸಿದಾಗ  XBB 1.16 ರೂಪಾಂತರ ದೃಢಪಟ್ಟಿತ್ತು. ಫೆಬ್ರವರಿಯಲ್ಲಿ ಒಟ್ಟು 59 ಮಾದರಿಗಳು ಪತ್ತೆಯಾದರೆ, ಮಾರ್ಚ್ ನಲ್ಲಿ ಇಲ್ಲಿಯವರೆಗೂ  ಇದೀಗ 15 ಮಾದರಿಗಳು ಪತ್ತೆಯಾಗಿವೆ ಎಂದು INSACOG ಹೇಳಿದೆ. 

ಈ ರೂಪಾಂತರದ ಕಾರಣದಿಂದ ಇತ್ತೀಚಿಗೆ ಕೋವಿಡ್-19 ಪ್ರಕರಣಗಳು ಹೆಚ್ಚಿವೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. H3N2 ಕಾರಣ ಇನ್ಫ್ಲುಯೆನ್ಸ ಪ್ರಕರಣಗಳು ಹೆಚ್ಚಾದರೆ, XBB 1.16 ರೂಪಾಂತರದ ಪ್ರಭಾವದಿಂದ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ನೇತೃತ್ವ ವಹಿಸಿದ್ದ ಮಾಜಿ ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಹೇಳಿದ್ದಾರೆ. ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವುದರಿಂದ ಈ ಸೋಂಕು ಹರಡುವಿಕೆಯನ್ನು ತಡೆಯಬಹುದಾಗಿದೆ. ಆದ್ದರಿಂದ ಸದ್ಯಕ್ಕೆ ಭಯಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. 

ಅಮೆರಿಕ, ಬ್ರೂನಿ, ಸಿಂಗಾಪುರ ಮತ್ತು ಯುಕೆ ನಂತರ ಭಾರತದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಕನಿಷ್ಠ 12 ದೇಶಗಳಲ್ಲಿ ಹೊಸ ರೂಪಾಂತರ XBB 1.16 ಪತ್ತೆಯಾಗಿದೆ. ಭಾರತದಲ್ಲಿ ಪ್ರಕರಣಗಳಲ್ಲಿ ಶೇ.281 ರಷ್ಟು ಹೆಚ್ಚಾಗಿದೆ. ಕಳೆದ 14 ದಿನಗಳಲ್ಲಿ ಸಾವಿನ ಪ್ರಕರಣದಲ್ಲಿ ಶೇ.17 ರಷ್ಟು ಹೆಚ್ಚಾಗಿದೆ ಎಂದು ಬಿಜ್ನೋರ್ ನ ಮಂಗಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಶಿಶು ವೈದ್ಯ ವಿಪಿನ್ ಎಂ ವಶಿಷ್ಠ ಟ್ವೀಟ್ ಮಾಡಿದ್ದಾರೆ.

126 ದಿನಗಳ ನಂತರ ಶನಿವಾರದಂದು ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 800 ದಾಟಿದೆ. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 5,389 ಕ್ಕೆ ಏರಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT