ದೇಶ

ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ 

Nagaraja AB

ನವದೆಹಲಿ: ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಎರಡು ದಿನಗಳ ಭೇಟಿಗಾಗಿ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ. ಕಿಶಿದಾ ಅವರನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬರಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿಶಿದಾ ಭೇಟಿ ಮಾಡಲಿದ್ದು, ಜಪಾನ್- ಇಂಡಿಯಾ ಫೆಸಿಪಿಕ್ ಕಾರ್ಯತಂತ್ರ ಮತ್ತು ಅದರ ಹೊಸ ರಕ್ಷಣಾ ನಿಲುವು ಕುರಿತು ಮಾತನಾಡಲಿದ್ದಾರೆ. 15 ವರ್ಷಗಳ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಜಪಾನ್ ಪ್ರಧಾನಿ ಶಿಂಜೋ ಅಬೆ ಮೊದಲ ಬಾರಿಗೆ ಇಂಡೋ-ಫೆಸಿಪಿಕ್ ಸಹಕಾರ ಕುರಿತಂತೆ ಮಾತನಾಡಿದ್ದರು.

ಉಭಯ ರಾಷ್ಟ್ರಗಳು 2006ರಿಂದಲೂ ಪ್ರತಿ ವರ್ಷ ಶೃಂಗಸಭೆ ನಡೆಸುತ್ತಿದ್ದು, ಕಳೆದ ವರ್ಷ ಮಾರ್ಚ್ ನಲ್ಲಿ ನವದೆಹಲಿಯಲ್ಲಿ ವಾರ್ಷಿಕ ಶೃಂಗ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ  ಸಭೆ ನಡೆಸುವುದಾಗಿ ಕಿಶಿದಾ ಟ್ವೀಟರ್ ನಲ್ಲಿ ತಿಳಿಸಿದ್ದು, ಉಭಯ ನಾಯಕರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ತಿಳಿಸಿದ್ದಾರೆ. 

SCROLL FOR NEXT