ದೇಶ

ಭಾರತಕ್ಕೆ ಆಗಮಿಸಿದ ಜಪಾನ್ ಪ್ರಧಾನಿ: ಚರ್ಚೆಯಾಗಲಿರುವ ವಿಷಯಗಳ ಪಟ್ಟಿಯಲ್ಲಿ ವಾಣಿಜ್ಯ ಒಪ್ಪಂದ, ಚೀನಾ

Srinivas Rao BV

ನವದೆಹಲಿ: ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಮಾ.20 ರಂದು ಭಾರತಕ್ಕೆ ಆಗಮಿಸಿದ್ದು, ದ್ವಿಪಕ್ಷೀಯ ಸಭೆಯಲ್ಲಿ ವಾಣಿಜ್ಯ, ತಂತ್ರಜ್ಞಾನದ ಒಪ್ಪಂದವನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಹಾಗೂ ಚೀನಾದಿಂದ ಎದುರಾಗುತ್ತಿರುವ ಆತಂಕಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
 
ಭಾರತ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆ, ಶಾಂತಿ, ಆಹಾರ ಹಾಗೂ ಇಂಧನ ಬೆಲೆಗಳ ಏರಿಕೆ ಸವಾಲುಗಳ ಬಗ್ಗೆಯೂ ಜಪಾನ್ ಪ್ರಧಾನಿ ಕಿಶಿದಾ ಪ್ರಧಾನಿ ಮೋದಿ ಜೊತೆ ಚರ್ಚೆ ನಡೆಸಲಿದ್ದಾರೆ.

ಇದೇ ವೇಳೆ ಭಾರತದ ಜಿ-20 ಹಾಗೂ ಜಪಾನ್ ನ ಜಿ-7 ಅಧ್ಯಕ್ಷತೆಗಳು ಒಮ್ಮುಖವಾಗಿ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ನಡುವೆ ರಕ್ಷಣೆ, ಭದ್ರತೆ, ಹೂಡಿಕೆ, ಉನ್ನತ ತಂತ್ರಜ್ಞಾನದ ವಿಷಯಗಳಲ್ಲಿ ಭಾರತ-ಜಪಾನ್ ಹೆಚ್ಚಿನ ಸಹಕಾರಕ್ಕೆ ಮುಂದಾಗುವುದನ್ನು ಈ ದ್ವಿಪಕ್ಷೀಯ ಸಭೆಯಲ್ಲಿ ನಿರೀಕ್ಷಿಸಬಹುದಾಗಿದೆ. ಕಳೆದ ವರ್ಷ ಮಾರ್ಚ್ ನಲ್ಲಿ ಭಾರತಕ್ಕೆ ಆಗಮಿಸಿದ್ದ ಕಿಶಿದಾ, ಅಂದು ಮುಂದಿನ 5 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 5 ಟ್ರಿಲಿಯನ್ ಯೆನ್ (3,20,000 ಕೋಟಿ ರೂಪಾಯಿ)ಗಳನ್ನು ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು. 

SCROLL FOR NEXT