ತಿರುಪತಿ ತಿರುಮಲ ದೇವಸ್ಥಾನ 
ದೇಶ

ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಕೋಟಿ ರೂ. RBI ದಂಡ, ಚೌಕಾಶಿ ಬಳಿಕ ಕಟ್ಟಿದ್ದು 3 ಕೋಟಿ ರೂ!

ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ (ಎಫ್‌ಸಿಆರ್‌ಎ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) 10ಕೋಟಿ ರೂಪಾಯಿ ದಂಡ ವಿಧಿಸಿದ್ದು, ಅಧಿಕಾರಿಗಳ ಚೌಕಾಶಿ ಬಳಿಕ 3 ಕೋಟಿ ರೂ ದಂಡ ಕಟ್ಟಲಾಗಿದೆ ಎಂದು ಹೇಳಲಾಗಿದೆ.

ತಿರುಪತಿ: ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ (ಎಫ್‌ಸಿಆರ್‌ಎ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) 10ಕೋಟಿ ರೂಪಾಯಿ ದಂಡ ವಿಧಿಸಿದ್ದು, ಅಧಿಕಾರಿಗಳ ಚೌಕಾಶಿ ಬಳಿಕ 3 ಕೋಟಿ ರೂ ದಂಡ ಕಟ್ಟಲಾಗಿದೆ ಎಂದು ಹೇಳಲಾಗಿದೆ.

ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯಡಿಯಲ್ಲಿ ಟಿಟಿಡಿಗೆ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ, ಎಫ್‌ಸಿಆರ್‌ಎ ನಿಯಂತ್ರಣ ಮಂಡಳಿ ಮತ್ತು ದೇವಾಲಯದ ಟ್ರಸ್ಟ್ ನಡುವೆ ಮಾತುಕತೆ, ಚೌಕಾಶಿ ನಡೆದು ಅಂತಿಮವಾಗಿ ದಂಡದ ಮೊತ್ತವನ್ನು 3 ಕೋಟಿ ರೂ.ಗೆ ಇಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಟಿಟಿಡಿ ವಿದೇಶಿ ದೇಣಿಗೆಯನ್ನು ಬಳಸಿಕೊಂಡ ರೀತಿಯಲ್ಲೂ ಕೇಂದ್ರ ಸಚಿವಾಲಯ ತಪ್ಪು ಕಂಡುಹಿಡಿದಿದ್ದು, ಇದಲ್ಲದೆ, ಟಿಟಿಡಿ ವಿದೇಶಿ ಕೊಡುಗೆಗಳ ಮೂಲಕ ಗಳಿಸಿದ ಬಡ್ಡಿಯ ಬಳಕೆಯ ಬಗ್ಗೆಯೂ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ. ದೇವಾಲಯದ ಟ್ರಸ್ಟ್‌ನ ಎಫ್‌ಸಿಆರ್‌ಎ ನೋಂದಣಿಯನ್ನು ತಾಂತ್ರಿಕ ವ್ಯತ್ಯಾಸಗಳಿಂದಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ನಿಧಿಯ ದುರುಪಯೋಗದಿಂದಲ್ಲ ಎಂದು ಹೇಳಲಾಗಿದೆ. ಮಾರ್ಚ್ 2023 ಕ್ಕೆ ಕೊನೆಗೊಳ್ಳುವ ಐದು ವರ್ಷಗಳ ಅವಧಿಯಲ್ಲಿ, ದೇವಾಲಯದ ಟ್ರಸ್ಟ್ 30 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಸಂಗ್ರಹಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದೇಶಿ ದೇಣಿಗೆಗಳನ್ನು ಠೇವಣಿ ಮಾಡಲು ನಿರಾಕರಿಸಿತು. ದಾನಿಗಳ ಗುರುತು ತಿಳಿದಿಲ್ಲ. 2020ರಲ್ಲಿ ಎಫ್‌ಸಿಆರ್‌ಎಗೆ ಮಾಡಿದ ತಿದ್ದುಪಡಿಗಳ ಪ್ರಕಾರ, ಎನ್‌ಜಿಒಗಳು ವಿದೇಶಿ ಕೊಡುಗೆಗಳನ್ನು ಎಸ್‌ಬಿಐ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಇದನ್ನು ಅನುಸರಿಸಿ, ಟಿಟಿಡಿ ಕೇಂದ್ರಕ್ಕೆ ಪತ್ರ ಬರೆದಿದ್ದು, ಎಫ್‌ಸಿಆರ್‌ಎಯು ‘ಹುಂಡಿ’ಯಲ್ಲಿ ಸ್ವೀಕರಿಸಿದ ಕೊಡುಗೆಗಳ ಪ್ರಕ್ರಿಯೆಯನ್ನು ನಿರ್ದಿಷ್ಟಪಡಿಸಿಲ್ಲ ಎನ್ನಲಾಗಿದೆ.

ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಸ್ಪಷ್ಟನೆ
ಈ ಬಗ್ಗೆ ಮಾತನಾಡಿರುವ ಟಿಟಿಡಿ ಅಧ್ಯಕ್ಷರಾದ ವೈವಿ ಸುಬ್ಬಾರೆಡ್ಡಿ ಅವರು, "ಭಕ್ತರು ಸ್ವಯಂಪ್ರೇರಿತವಾಗಿ ನೀಡುವ ಕೊಡುಗೆ, ಕಾಣಿಕೆಗಳನ್ನು ಹೊರತುಪಡಿಸಿ ವಿದೇಶಿ ಕೊಡುಗೆಗಳನ್ನು ಪಡೆಯಲು, ಆಕರ್ಷಿಸಲು ಅಥವಾ ಸ್ವೀಕರಿಸಲು ತಿರುಪತಿ ತಿರುಮಲ ದೇವಸ್ಥಾನಂಗೆ ಯಾವುದೇ ಮಾರ್ಗಗಳು ಇರಲಿಲ್ಲ ಎಂದು ಸಚಿವಾಲಯಕ್ಕೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

ಹೀಗಿದ್ದರೂ, ದಂಡ ಪಾವತಿಸಿರುವುದನ್ನು ಅವರು ಒಪ್ಪಿದ್ದು, ವಿದೇಶಿ ದೇಣಿಗೆ ಸ್ವೀಕರಿಸುವ ಸಂದರ್ಭದಲ್ಲಿ ಆಗಿರುವ ಕೆಲವೊಂದು ಲೋಪದೋಷಗಳಿಗಾಗಿ ಈ ದಂಡ ಪಾವತಿಸಲಾಗಿದೆ ಎಂದು ಹೇಳಿದ್ದಾರೆ. "ವಿದೇಶದಿಂದ ಟಿಟಿಡಿಗೆ ಭಕ್ತರು ನೀಡುವ ಕೊಡುಗೆಗಳನ್ನು ಭಾರತೀಯ ಕರೆನ್ಸಿಗೆ ಪರಿವರ್ತನೆ ಮಾಡುವುದರಲ್ಲಿ ವ್ಯತ್ಯಾಸವಾಗಿದೆ. ಈ ಮೊತ್ತವನ್ನು ಖರ್ಚು ಮಾಡುವುದಕ್ಕೂ ನಿಯಮ ಮತ್ತು ನಿಬಂಧನೆಗಳಿವೆ. ಖರ್ಚು ಮಾಡಿದ ಮೊತ್ತ ಅತ್ಯಲ್ಪವಾಗಿದ್ದರೂ ವಿದೇಶಿ ಕೊಡುಗೆಗಳನ್ನು ಖರ್ಚು ಮಾಡಿದ ರೀತಿಗೆ ಎಂಎಚ್‌ಎ ಆಕ್ಷೇಪಿಸಿದೆ ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಹೇಳಿದ್ದಾರೆ.

ಟಿಟಿಡಿ ವಿಳಂಬವೇ ತೊಂದರೆಗೆ ಕಾರಣ
ಕಳೆದ ಮೂರು ವರ್ಷಗಳಿಂದ ಟಿಟಿಡಿ ತನ್ನ ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ತಿರುಮಲದ ವೆಂಕಟೇಶ್ವರ ದೇವಸ್ಥಾನದ ವ್ಯವಹಾರಗಳನ್ನು ನಿರ್ವಹಿಸುವ ಟಿಟಿಡಿ ಮತ್ತು ರಾಜ್ಯ ಸರ್ಕಾರವು ಎಫ್‌ಸಿಆರ್‌ಎ ನೋಂದಣಿಯನ್ನು ನವೀಕರಿಸಲು ಪ್ರಯತ್ನಿಸುತ್ತಿದೆ. ಇದರ ನವೀಕರಣವನ್ನು ಟಿಟಿಡಿ ವಿಳಂಬ ಮಾಡಿರುವುದೇ ತೊಂದರೆಗೆ ಕಾರಣ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ ತಾಂತ್ರಿಕ ಕಾರಣಗಳಿಂದ ಎಫ್‌ಸಿಆರ್‌ಎ ನೋಂದಣಿ ಸ್ಥಗಿತಗೊಂಡಿದೆ. ಇದು ವಿದೇಶಿ ಕೊಡುಗೆ ದುರುಪಯೋಗದಿಂದ ಆಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. 

ಕಳೆದ ಐದು ವರ್ಷಗಳಲ್ಲಿ ಟಿಟಿಡಿಗೆ 30 ಕೋಟಿ ರೂ. ಮೌಲ್ಯದ ವಿದೇಶಿ ತೆರಿಗೆ ಸಂಗ್ರಹವಾಗಿದೆ. ದಾನಿಗಳ ಗುರುತು ತಿಳಿಯದೆ ಇರುವುದರಿಂದ ಎಸ್‌ಬಿಐ ಬ್ಯಾಂಕ್‌ ಟಿಟಿಡಿಗೆ ಬಂದ ವಿದೇಶಿ ದೇಣಿಗೆಗಳನ್ನು ಠೇವಣಿಯಡಲು ನಿರಾಕರಿಸಿತ್ತು. 2020 ರಲ್ಲಿ ಎಫ್‌ಸಿಆರ್‌ಎಗೆ ಮಾಡಿದ ತಿದ್ದುಪಡಿಗಳ ಪ್ರಕಾರ, ಎನ್‌ಜಿಒಗಳು ವಿದೇಶಿ ಕೊಡುಗೆಗಳನ್ನು ಎಸ್‌ಬಿಐ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಈ ಕುರಿತು ಟಿಟಿಡಿಯು ಕೇಂದ್ರಕ್ಕೆ ಪತ್ರ ಬರೆದಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT