ದೇಶ

ಪೇಟವಿಲ್ಲದೆ ಮಾಸ್ಕ್ ಧರಿಸಿ ಅಮೃತ್ ಪಾಲ್ ಸಿಂಗ್ ದೆಹಲಿಯ ಮಾರ್ಕೆಟ್ ನಲ್ಲಿ ಓಡಾಟ; ಸಿಸಿಟಿವಿಯಲ್ಲಿ ಪತ್ತೆ!

Nagaraja AB

ಚಂಡೀಗಢ: ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿರುವ ಧಾರ್ಮಿಕ ಪ್ರವಚಕ, ಖಲಿಸ್ತಾನ್ ನಾಯಕ ಅಮೃತಪಾಲ್ ಸಿಂಗ್ ಪೇಟವಿಲ್ಲದೆ ರಾಜಧಾನಿ ನವದೆಹಲಿಯ ಮಾರ್ಕೆಟ್ ನಲ್ಲಿ ಓಡಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಹಚರ ಪಾಪಲ್ ಪ್ರೀತ್ ಸಿಂಗ್ ಜೊತೆಗೆ ಅಮೃತಪಾಲ್ ಸಿಂಗ್ ಇರುವ ಹೊಸ ವಿಡಿಯೋವೊಂದು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಕಣ್ಣಿಗೆ ಕಪ್ಪು ಬಣ್ಣದ ಗ್ಲಾಸ್ ಧರಿಸಿ, ಮಾಸ್ಕ್ ಹಾಕಿಕೊಂಡು ಅಮೃತಪಾಲ್ ಸಿಂಗ್ ಕಾಣಿಸಿಕೊಂಡಿದ್ದರೆ, ಆತನ ಹಿಂದೆ ಬ್ಯಾಗ್ ನೊಂದಿಗೆ ಪಾಪಲ್ ಪ್ರೀತ್ ಸಿಂಗ್ ನಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ವಿಡಿಯೋ ಬಗ್ಗೆ ಪಂಜಾಬ್ ಪೊಲೀಸರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಪಲ್ ಪ್ರೀತ್ ಸಿಂಗ್ ಅಮೃತಪಾಲ್ ಸಿಂಗ್ ಅವರ ಮಾರ್ಗದರ್ಶಕ ಎಂದು ಹೇಳಲಾಗುತ್ತದೆ.

ಅಮೃತಪಾಲ್ ಸಿಂಗ್ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ISI ಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಮಾರ್ಚ್ 18 ರಂದು ಆತನ ವಿರುದ್ಧ ಪೋಲೀಸರ ಹುಡುಕಾಟ ಆರಂಭವಾದಾಗಿನಿಂದಲೂ ಆತನ  ಬೋಧಕನ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಆದರೆ ಅಮೃತಪಾಲ್ ಸಿಂಗ್ ಅನೇಕ ಬಾರಿ ತನ್ನ ವೇಷ ಬದಲಾಯಿಸುವ ಮೂಲಕ ವಿವಿಧ ವಾಹನಗಳಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 19 ರಂದು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್‌ನಲ್ಲಿರುವ ತನ್ನ ಮನೆಯಲ್ಲಿ ಅಮೃತಪಾಲ್ ಸಿಂಗ್ ಮತ್ತು ಪಾಪಲ್‌ಪ್ರೀತ್ ಸಿಂಗ್‌ಗೆ ಮಹಿಳೆಯೊಬ್ಬರು ಆಶ್ರಯ ನೀಡಿದ್ದರು. ಮಾರ್ಚ್ 25 ರಂದು ಅಮೃತಪಾಲ್ ಸಿಂಗ್ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವಂತೆ ಸಿಸಿಟಿವಿ ದೃಶ್ಯಾವಳಿಗಳು ಹೊರಹೊಮ್ಮಿದವು. ಬಂಧಿತ ವ್ಯಕ್ತಿಯ ಬಿಡುಗಡೆಗಾಗಿ ಅಮೃತ್‌ಪಾಲ್ ಸಿಂಗ್ ಮತ್ತು ಅವರ ಬೆಂಬಲಿಗರು ಅಮೃತಸರ ಬಳಿಯ ಅಜ್ನಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಮೂರು ವಾರಗಳ ನಂತರ ಪೊಲೀಸರು ಕಾರ್ಯಾಚರಣೆ ಆರಂಭವಾಗಿದೆ. ಈ ಘಟನೆಯಲ್ಲಿ ಆರು ಪೊಲೀಸರು ಗಾಯಗೊಂಡಿದ್ದರು. ಆರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಪಂಜಾಬ್ ಪೊಲೀಸರು ಕೊಲೆ ಮತ್ತು ದಾಳಿಯ ಯತ್ನ, ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕ ಸೇವಕರ  ಕರ್ತವ್ಯಕ್ಕೆ ಅಡ್ಡಿಪಡಿ ಸೇರಿದಂತೆ ಹಲವು ಅಪರಾಧ ಪ್ರಕರಣಗಳ ಅಡಿಯಲ್ಲಿ ಅಮೃತಪಾಲ್ ಸಿಂಗ್ ನ ಹಲವಾರು ಸಹಚರರನ್ನು ಬಂಧಿಸಿದ್ದಾರೆ. ಅವರಲ್ಲಿ ಕೆಲವರ ವಿರುದ್ಧ ಅವರು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹಾಕಿದ್ದಾರೆ. ಶಾಂತಿ ಉಲ್ಲಂಘನೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಭಂಗದ ಆತಂಕದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ 353 ಮಂದಿಯಲ್ಲಿ 197 ಜನರನ್ನು ಪೊಲೀಸರು ಭಾನುವಾರ  ಬಿಡುಗಡೆ ಮಾಡಿದ್ದಾರೆ 

SCROLL FOR NEXT