ದೇಶ

ರಾಮನವಮಿ ಘರ್ಷಣೆಯ ಹಿಂದಿರುವುದು ಹಿಂದೂಗಳಲ್ಲ, ಬಿಜೆಪಿ: ಮಮತಾ ಬ್ಯಾನರ್ಜಿ

Srinivas Rao BV

ಕೋಲ್ಕತ್ತ: ಪಶ್ಚಿಮ ಬಂಗಾಳದ ಹೌರಾದಲ್ಲಿ ರಾಮನವಮಿ ಆಚರಣೆ ವೇಳೆ ನಡೆದ ಘರ್ಷಣೆಯ ಹಿಂದಿರುವುದು ಹಿಂದೂಗಳಲ್ಲ ಬಿಜೆಪಿ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಘರ್ಷಣೆ ನಡೆದ ಪ್ರದೇಶದಲ್ಲಿ ಶಾಂತಿ ಕಾಪಾಡುವಂತೆ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. ಹೌರಾದಲ್ಲಿ ನಡೆದಿರುವ ಘಟನೆ ಅತ್ಯಂತ ದುರದೃಷ್ಟಕರ. ಹಿಂದೂಗಳಾಗಲೀ ಮುಸ್ಲಿಮರಾಗಲೀ ಈ ಘಟನೆಯ ಹಿಂದಿರಲಿಲ್ಲ. ಬದಲಾಗಿ ಬಿಜೆಪಿ ಹಾಗೂ ಬಜರಂಗದಳ ಹಾಗೂ ಇನ್ನೂ ಇಂತಹ ಅನೇಕ ಸಂಘಟನೆಗಳು ಶಸ್ತ್ರಾಸ್ತ್ರಗಳ ಸಹಿತ ಹಿಂಸಾಚಾರದಲ್ಲಿ ತೊಡಗಿದ್ದರು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

"ಘರ್ಷಣೆಯಲ್ಲಿ ಯಾವೆಲ್ಲಾ ಆಸ್ತಿಗಳಿಗೆ ಹಾನಿಯುಂಟಾಗಿತ್ತೋ ಅವುಗಳ ಮಾಲಿಕರಿಗೆ ರಾಜ್ಯ ಸರ್ಕಾರ ನೆರವು ನೀಡಲಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೌರಾದಲ್ಲಿ ನಡೆದ ಘರ್ಷಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಮಂದಿಯನ್ನು ಬಂಧಿಸಲಾಗಿದೆ. 

SCROLL FOR NEXT