ಮೋಹನ್ ಭಾಗ್ವತ್ 
ದೇಶ

ಪಾಕಿಸ್ತಾನದಲ್ಲಿನ ಮಂದಿಗೆ ಅತೃಪ್ತಿ, ದೇಶ ವಿಭಜನೆಯಾಗಿದ್ದು ತಪ್ಪು ಎಂದು ಅವರಿಗೂ ಅನ್ನಿಸುತ್ತಿದೆ: ಮೋಹನ್ ಭಾಗ್ವತ್

ಸ್ವಾತಂತ್ರ್ಯ ಪಡೆದು 7 ದಶಕಗಳೇ ಕಳೆದಿದ್ದರೂ, ಪಾಕಿಸ್ತಾನದಲ್ಲಿನ ಮಂದಿ ಅತೃಪ್ತಿ ಹೊಂದಿದ್ದಾರೆ. ದೇಶ ವಿಭಜನೆಯಾಗಿದ್ದು ತಪ್ಪು ಎಂಬ ಅಭಿಪ್ರಾಯ ಅವರಲ್ಲೂ ಇದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. 

ಭೋಪಾಲ್:  ಸ್ವಾತಂತ್ರ್ಯ ಪಡೆದು 7 ದಶಕಗಳೇ ಕಳೆದಿದ್ದರೂ, ಪಾಕಿಸ್ತಾನದಲ್ಲಿನ ಮಂದಿ ಅತೃಪ್ತಿ ಹೊಂದಿದ್ದಾರೆ. ದೇಶ ವಿಭಜನೆಯಾಗಿದ್ದು ತಪ್ಪು ಎಂಬ ಅಭಿಪ್ರಾಯ ಅವರಲ್ಲೂ ಇದೆ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. 

ಭೋಪಾಲ್ ನಲ್ಲಿ ನಡೆದ ಕ್ರಾಂತಿಕಾರಿ ಹೇಮು ಕಲಾನಿ ಅವರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮೋಹನ್ ಭಾಗ್ವತ್ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಸಿಂಧಿಗಳು ಭಾಗಿಯಾಗಿದ್ದರು.
 
1947 ಕ್ಕೂ ಮುನ್ನ ದೇಶ ಇಬ್ಭಾಗವಾಗುವುದಕ್ಕೂ ಮುನ್ನ ಇದು ಭಾರತವಾಗಿತ್ತು.  ದೇಶದಿಂದ ಹೊರ ಹೋದವರು ಈಗಲಾದರೂ ಶಾಂತಿಯಿಂದ ಇದ್ದಾರೆಯೇ? ಅವರಲ್ಲಿ ನೋವಿದೆ ಎಂದು ಭಾಗ್ವತ್ ಪಾಕಿಸ್ತಾನದ ಬಗ್ಗೆ ಮಾತನಾಡಿದ್ದಾರೆ. 

ಉಭಯ ದೇಶಗಳ ನಡುವೆ ಈಗಿನ ಬಾಂಧವ್ಯದ ಬಗ್ಗೆ ಮಾತನಾಡಿರುವ ಮೋಹನ್ ಭಾಗ್ವತ್, ಭಾರತ ಬೇರೆಯವರ ಮೇಲೆ ದಾಳಿ ಮಾಡುವ ಸಂಸ್ಕೃತಿಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ. 

"ಭಾರತ ಪಾಕ್ ಮೇಲೆ ದಾಳಿ ಮಾಡಬೇಕೆಂದು ನಾನು ಹೇಳುವುದಿಲ್ಲ. ಖಂಡಿತವಾಗಿ ಹೇಳುವುದಿಲ್ಲ. ನಾವು ಮತ್ತೊಬ್ಬರ ಮೇಲೆ ದಾಳಿ ನಡೆಸುವ ಸಂಸ್ಕೃತಿಗೆ ಸೇರಿದವರಲ್ಲ" ಎಂದು ಮೋಹನ್ ಭಾಗ್ವತ್ ಹೇಳಿದ್ದಾರೆ. 

ನಾವು ಆತ್ಮರಕ್ಷಣೆಗಾಗಿ ತಕ್ಕ ಪ್ರತ್ಯುತ್ತರ ನೀಡುತ್ತೇವೆಯಷ್ಟೇ ಎಂದು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೋಹನ್ ಭಾಗ್ವತ್ ಹೇಳಿದ್ದಾರೆ. 

ಭಾರತದ ವಿಭಜನೆಯಾಗಿದ್ದು ತಪ್ಪು ಎಂದು ಪಾಕಿಸ್ತಾನದ ಮಂದಿ ಹೇಳುತ್ತಿದ್ದಾರೆ, ಎಲ್ಲರೂ ದೇಶವಿಭಜನೆಯಾಗಿದ್ದು ತಪ್ಪು ಎಂದು ಹೇಳುತ್ತಿದ್ದಾರೆ ಎಂದು ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ. ಸಿಂಧು ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಭಾಗ್ವತ್, ಸಿಂಧಿಗಳು ಸಿಂಧು ಸಂಸ್ಕೃತಿ ಮೌಲ್ಯಗಳ ಸಲುವಾಗಿ ಆ ಭಾರತದಿಂದ ಈ ಭಾರತಕ್ಕೆ ಬಂದಿದ್ದಾರೆ ಎಂದು ಭಾಗ್ವತ್ ಹೇಳಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ

Sugar Price: ಈರುಳ್ಳಿ ಬೆನ್ನಲ್ಲೇ ಇದೀಗ ಸಕ್ಕರೆ ಶಾಕ್: ಕೆಜಿಗೆ 65 ರೂ ದಾಟಿದ ದರ, ಗ್ರಾಹಕರ ಜೇಬಿಗೆ 'ಸಿಹಿ ಕಹಿ'!

2nd Test: ಬೌಂಡರಿ ಲೈನ್ ಬಳಿ ದುರ್ವರ್ತನೆ ತೋರಿದ್ದ ಲಂಕಾ ಆಟಗಾರ Prabath Jayasuriyaಗೆ ಬರೆ ಹಾಕಿದ ICC!