ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಹು ನಿರೀಕ್ಷಿತ ಒಬಿಸಿ ಸಮೀಕ್ಷೆ ಆರಂಭಿಸಿದ ಒಡಿಶಾ

ಬಹು ನಿರೀಕ್ಷಿತ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಸಮೀಕ್ಷೆಯನ್ನು ಸೋಮವಾರ ಒಡಿಶಾದಾದ್ಯಂತ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
Lingaraj Badiger
Updated On : 2 May 2023, 8:28 pm

ಭುವನೇಶ್ವರ: ಬಹು ನಿರೀಕ್ಷಿತ ಇತರೆ ಹಿಂದುಳಿದ ವರ್ಗಗಳ(ಒಬಿಸಿ) ಸಮೀಕ್ಷೆಯನ್ನು ಸೋಮವಾರ ಒಡಿಶಾದಾದ್ಯಂತ ಆರಂಭವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  
ಸಮೀಕ್ಷೆಯನ್ನು ಒಡಿಶಾ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ನಲ್ಲಿ ನಡೆಸುತ್ತಿದ್ದು, ಮೇ 1 ರಿಂದ ಮೇ 27 ರವರೆಗೆ ಸಮೀಕ್ಷೆ ನಡೆಸಲಿದೆ.

ರಾಜ್ಯದ ಎಲ್ಲಾ 314 ಬ್ಲಾಕ್‌ಗಳು ಮತ್ತು 114 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಸಮೀಕ್ಷೆ ನಡೆಸಲಾಗುತ್ತಿದೆ.

ಒಡಿಶಾ, ಬಿಹಾರದ ನಂತರ ಒಬಿಸಿ ಸಮೀಕ್ಷೆಯನ್ನು ನಡೆಸುತ್ತಿರುವ ಎರಡನೇ ರಾಜ್ಯವಾಗಿದೆ.

Advertisement

Advertisement

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ 208 ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಸಮೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಒಡಿಶಾ: ನಕ್ಸಲರ ಕ್ಯಾಂಪ್ ನಲ್ಲಿ ಕಾಂಡೋಮ್, ಗರ್ಭ ನಿರೋಧಕ, ಗರ್ಭಧಾರಣೆ ಪರೀಕ್ಷಾ ಕಿಟ್‌ಗಳು ಪತ್ತೆ

ಪ್ರತಿ ಕುಟುಂಬದ ಒಬ್ಬ ಸದಸ್ಯರು ಗುರುತಿನ ಚೀಟಿಗಳಾದ ಆಧಾರ್, ವೋಟರ್ ಐಡಿ, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ನೊಂದಿಗೆ ಸಮೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಬಹುದು ಮತ್ತು ಸಮೀಕ್ಷೆಯ ನಮೂನೆಗಳನ್ನು ಭರ್ತಿ ಮಾಡಬಹುದು. ಪರ್ಯಾಯವಾಗಿ, ಅವರು ಒಡಿಶಾ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ(OSCBC) ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ಆನ್‌ಲೈನ್‌ನಲ್ಲೂ ತಮ್ಮ ವಿವರ ಸಲ್ಲಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement