ದೇಶ

ಆನಂದ್ ಮೋಹನ್ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

Lingaraj Badiger

ನವದೆಹಲಿ: 1994ರಲ್ಲಿ ಅಂದಿನ ಗೋಪಾಲಗಂಜ್‌ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಜಿ ಕೃಷ್ಣಯ್ಯ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಸಂಸದ ಆನಂದ್‌ ಮೋಹನ್‌ ಅವರನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಿರುವ ಬಿಹಾರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ಸರ್ವೋಚ್ಛ ನ್ಯಾಯಾಲಯ ಮೇ 8ರಂದು ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

ಹತ್ಯೆಗೀಡಾದ ಅಧಿಕಾರಿಯ ವಿಧವೆ ಉಮಾ ಕೃಷ್ಣಯ್ಯ ಪರ ವಕೀಲರು ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಿದ್ದು, ಮೇ 8 ರಂದು ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪಾರ್ದಿವಾಲಾ ಅವರ ಪೀಠ ತಿಳಿಸಿದೆ.

ಬಿಹಾರದ ಜೈಲು ನಿಯಮಗಳಲ್ಲಿ ತಿದ್ದುಪಡಿ ತಂದ ನಂತರ ಆನಂದ್ ಮೋಹನ್ ಅವರನ್ನು ಏಪ್ರಿಲ್ 27 ರಂದು ಸಹರ್ಸಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ದರೋಡೆಕೋರ- ರಾಜಕಾರಣಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ವಾದಿಸಿದ ಅರ್ಜಿದಾರರು, ಇದು ಅವರ ಜೀವನಪೂರ್ತಿ ಜೈಲುವಾಸವನ್ನು ಹೊಂದಿದೆ. ಅದನ್ನು ಕೇವಲ 14 ವರ್ಷಗಳ ಕಾಲ ಯಾಂತ್ರಿಕವಾಗಿ ಅರ್ಥೈಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

SCROLL FOR NEXT