ದೇಶ

ಹಿಮಾಲಯನ್ ವಯಾಗ್ರ ಹುಡುಕಲು ತೆರಳಿದ್ದ 5 ಮಂದಿ ಹಿಮಪಾತಕ್ಕೆ ಸಿಲುಕಿ ಸಮಾಧಿ?

Shilpa D

ಕಠ್ಮಂಡು: ಹಿಮಾಲಯನ್ ವಯಾಗ್ರ ಹುಡುಕಲು ನೇಪಾಳಕ್ಕೆ ತೆರಳಿದ್ದ ಐವರು ನಾಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ನೇಪಾಳದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಹಿಮದೊಳಗೆ ಸಿಲುಕಿರಬಹುದು ಎಂದು ತಿಳಿದು ಬಂದಿದೆ.

ಕಾಮೋತ್ತೆಜಕ ಔಷಧಿ ಗಿಡಮೂಲಿಕೆಯಾದ ‘ಹಿಮಾಲಯನ್ ವಯಾಗ್ರ’ವನ್ನು  ಹುಡುಕಲು ಹೋದ ಐವರಲ್ಲಿ ಒಬ್ಬ ಪುರುಷ ಹಾಗೂ ನಾಲ್ವರು ಮಹಿಳೆಯರು ಸೇರಿದ್ದಾರೆ. ಅವರೆಲ್ಲ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು 8 ತಂಡಗಳ ಕಾರ್ಯಾಚರಣೆ ನಡೆದಿದೆ’ ಎಂದು ಡಾರ್ಕುಲಾ ಎಸ್‌ಪಿ ಪ್ರದೀಪ್ ಸಿಂಗ್ ಧಾಮಿ ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಬ್ಯಾನಸ್ ಎಂಬ ಹಳ್ಳಿಯ ಪರ್ವತ ಪ್ರದೇಶದಲ್ಲಿ ಹಿಮ ಕುಸಿತವಾಗಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಹಿಮಾಲಯನ್ ವಯಾಗ್ರ ಹೆಕ್ಕಲು ಹೋಗಿದ್ದ ಐವರು ಹಿಮ ಕುಸಿತಕ್ಕೆ ಸಿಲುಕಿದ್ದಾರೆ ಎಂದು ಧಾಮಿ ತಿಳಿಸಿದ್ದಾರೆ.

ಹಿಮಾಲಯನ್ ವಯಾಗ್ರ ಅಥವಾ ಯರ್ಸ್‌ಗುಂಬಾ ಎಂಬ ಅಣಬೆ ಜಾತಿಯ ಪರಾವಲಂಬಿ ಸಸ್ಯ . ಇದನ್ನು ಸಂಪ್ರದಾಯಿಕ ಚೀನಿ ಔಷಧಿ ತಯಾರಿಕೆಯಲ್ಲಿ ಹೆಚ್ಚು ಬಳಸುತ್ತಾರೆ. ಇದಕ್ಕೆ ಹೆಚ್ಚು ಬೆಲೆಯಿದ್ದು, ಕಾಮೋತ್ತೆಜಕ ಮಾತ್ರೆಗಳಲ್ಲಿ ಹಾಗೂ ಹೃದಯ, ಮೂತ್ರಪಿಂಡ ಸಮಸ್ಯೆಗಳಲ್ಲಿ ಬಳಸುತ್ತಾರೆ.

ಹಿಮಾಲಯನ್ ವಯಾಗ್ರವು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಸಿಗುವಂತ ಔಷಧಿ ಸಸ್ಯವಾಗಿದೆ. ನೇಪಾಳದಲ್ಲಿ ಮೇ ತಿಂಗಳಲ್ಲಿ ಸ್ಥಳೀಯರು ಯರ್ಸ್‌ಗುಂಬಾ ಉತ್ಸವ ಎಂದು ಆಚರಿಸಿ ಈ ಸಸ್ಯವನ್ನು ಆಯಲು ಪರ್ವತ ಪ್ರದೇಶಗಳಲ್ಲಿ ಅಲೆಯುತ್ತಾರೆ.

ಈ ವರ್ಷ ನೇಪಾಳದ ಹಿಮಾಲಯದಲ್ಲಿ ಕೊಯ್ಲು ಪ್ರಾರಂಭವಾಗಲಿದೆ, ನಂತರ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದು ನೇಪಾಳ, ಭಾರತ ಮತ್ತು ಭೂತಾನ್‌ನಲ್ಲಿ 3000 ಮತ್ತು 5000 ಮೀಟರ್‌ಗಳ ನಡುವಿನ ಎತ್ತರದಲ್ಲಿ ಕಂಡುಬರುತ್ತದೆ. ಯರ್ಸಗುಂಬಾವನ್ನು ಹಿಮಾಲಯನ್ ವಯಾಗ್ರ ಎಂದೂ ಕರೆಯುತ್ತಾರೆ, ಇದು ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಮಾತ್ರ ಕಂಡುಬರುತ್ತದೆ.

SCROLL FOR NEXT