ದೇಶ

ಹನಿಟ್ರ್ಯಾಪ್: ಪಾಕ್ ಗೆ ರಹಸ್ಯ ಮಾಹಿತಿ ನೀಡಿದ ಡಿಆರ್ ಡಿಒ ವಿಜ್ಞಾನಿ ಬಂಧನ

Lingaraj Badiger

ಪುಣೆ: ಹನಿಟ್ರ್ಯಾಪ್ ಒಳಗಾಗಿ ಪಾಕಿಸ್ತಾನಿ ಏಜೆಂಟರಿಗೆ ಗೌಪ್ಯ ಮಾಹಿತಿ ನೀಡಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಯೊಬ್ಬರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಜ್ಞಾನಿಯು ವಾಟ್ಸಾಪ್ ಮತ್ತು ವೀಡಿಯೊ ಕರೆಗಳ ಮೂಲಕ "ಪಾಕಿಸ್ತಾನ ಗುಪ್ತಚರ ಆಪರೇಟಿವ್" ನ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದು ಹನಿಟ್ರ್ಯಾಪ್ ಪ್ರಕರಣ ಎಂದು ಅವರು ಹೇಳಿದ್ದಾರೆ.

ಪ್ರಮುಖ ರಕ್ಷಣಾ ಸಂಶೋಧನಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

"ಶತ್ರು ದೇಶವು ತನ್ನ ಬಳಿಯಿರುವ ಅಧಿಕೃತ ರಹಸ್ಯಗಳನ್ನು ಪಡೆದು ದೇಶದ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ತಿಳಿದಿದ್ದರೂ, ವಿಜ್ಞಾನಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಶತ್ರು ದೇಶಕ್ಕೆ ವಿವರಗಳನ್ನು ನೀಡಿದ್ದಾರೆ" ಎಂದು ಎಟಿಎಸ್ ಪ್ರಕಟಣೆ ತಿಳಿಸಿದೆ.

SCROLL FOR NEXT